Amazing Technology: ಈ ಕ್ಯಾಮೆರಾ ನಿಮ್ಮ ಹೊಟ್ಟೆಯಲ್ಲಿ ಏನಾಗುತ್ತಿದೆ ಎಂಬುದನ್ನು ತೋರಿಸುತ್ತದೆ!

Spread the love

ಸ್ನೇಹಿತರೆ ನಾವು ನೀವೆಲ್ಲ ನಮ್ಮ ಮನೆಗೆ ಕಳ್ಳರು ಬರಬಾರದೆಂದು ಅಥವಾ ಮನೆಯ ಮೇಲೆ ನಿಗ್ರಾಣಿ ವಹಿಸಲು ಮನೆಯ ಹೊರಗಡೆನೋ ಅಥವಾ ಆಫೀಸಿನ ಒಳಗಡೆನೋ ಕ್ಯಾಮರಾ ಅಳವಡಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕ್ಯಾಮೆರಾ ನಮ್ಮ ಹೊಟ್ಟೆ ಒಳಗೆ ಏನು ನಡೆಯುತ್ತಿದೆ ಮತ್ತು ಅದು ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಡಿಯೋ ಮೂಲಕ ಸೆರೆ ಹಿಡಿದಿದೆ.
ಹೌದು ಸ್ನೇಹಿತರೆ ಇದು ಸತ್ಯ 2022ರ ಫೆಬ್ರವರಿ ತಿಂಗಳಲ್ಲಿ ಸ್ಕಾಟ್ ಲ್ಯಾಂಡ್ ದೇಶದ 2000 ರೋಗಿಗಳಿಗೆ ಕರುಳಿನ ಕ್ಯಾನ್ಸರ್ ಇರುವುದನ್ನು ಈ ಕ್ಯಾಮೆರಾದಿಂದಲೇ ಪತ್ತೆ ಮಾಡಲಾಗಿದೆ. ಅಂದ ಹಾಗೆ ಈ ಕ್ಯಾಮೆರಾದ ಹೆಸರು ‘ಕ್ಯಾಮರಾ ಪಿಲ್’ ಅಂತ. ಈ ಕ್ಯಾಮೆರಾವನ್ನು ನೀವು ನುಂಗಬಹುದಾಗಿದೆ. ಏಕೆಂದರೆ ಇದು ನಾವು ರೋಗಗ್ರಸ್ಥರಾದಾಗ ತೆಗೆದುಕೊಳ್ಳುವ ಟ್ಯಾಬ್ಲೆಟ್ ನ ಗಾತ್ರದಷ್ಟಿರುತ್ತದೆ. ಇತ್ತೀಚಿಗೆ ಹೆಚ್ಚು ಶುದ್ದಿಯಲ್ಲಿರುವ ಈ ಅಡ್ವಾನ್ಸ್ ಕ್ಯಾಮೆರಾ ಪಿಲ್ ನ ವಿಶೇಷತೆ ಏನು, ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!


ಕ್ಯಾಮೆರಾ ಪಿಲ್ ಎಂದರೇನು?
ಇದೊಂದು ಅತಿ ಚಿಕ್ಕ ವಯರ್ಲೆಸ್ ಕ್ಯಾಮೆರಾ ಆಗಿದ್ದು ಇದನ್ನು ಟ್ಯಾಬ್ಲೆಟ್ ರೂಪದಲ್ಲಿ ನಂಗಬಹುದಾಗಿದೆ. ಇದನ್ನು ಮೊಟ್ಟ ಮೊದಲ ಬಾರಿಗೆ 1980 ದಶಕದಲ್ಲಿ ಇಸ್ರೆಲನ ಇಂಜಿನಿಯರ್ ಆದ ಗ್ಯಾವೆರಿಯಲ್ ಇದ್ದಾನ್ ಮತ್ತು ಕರುಳ ತಜ್ಞರಾದ ಐತನ್ ಸ್ಕಾಪಾ ಅವರು ಇದರ ಬಗ್ಗೆ ಅನ್ವೇಷಣೆ ಮಾಡಿದ್ದರು. ಆರಂಭದಲ್ಲಿ ಇದು ಹೆಚ್ಚು ಬ್ಯಾಟರಿ ಬಳಸುತ್ತಿತ್ತು ಮತ್ತು ಅದರಿಂದ ಸಂಗ್ರಹಿಸಲಾದ ಮಾಹಿತಿ ವರ್ಗಾವಣೆ ತುಂಬಾ ನಿಧಾನವಾಗಿತ್ತು. ಆದ್ದರಿಂದ ಇದು ಹೆಚ್ಚು ಕಾಲ ಬಳಕೆಗೆ ಬರುವಂತಹ ತಂತ್ರಜ್ಞಾನ ಅಲ್ಲ ಎಂದು ಅವರು ಭಾವಿಸಿದ್ದರು. ಆದರೆ 1993ರಲ್ಲಿ ಇದ್ದಾನ್ ಅವರು ಈ ಕೆನರಾ ಅನ್ನು ಮೂರು ಭಾಗ ಮಾಡಿ ಬಳಸಿದಾಗ ಅದು ಕಡಿಮೆ ಬ್ಯಾಟರಿ ಬಳಸುವುದು ಮನಗಂಡರು. ಈ ಮೂರು ಭಾಗಗಳ ವ್ಯವಸ್ಥೆಯು- ಕ್ಯಾಮರಾ, ಟ್ರಾನ್ಸ್ಮಿಟರ್ ಮತ್ತು ರೆಕಾರ್ಡರ್, ಹಾಗೂ ಸಾಫ್ಟ್ವೇರ್ ಭಾಗಗಳನ್ನು ಒಳಗೊಂಡಿತ್ತು. ಮುಂದೆ 2001ರಲ್ಲಿ ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯು ಈ ಟ್ಯಾಬ್ಲೆಟ್ ಅನ್ನು ಅಧಿಕೃತವಾಗಿ ರೋಗಿಗಳ ಬಳಕೆಗೆ ಅನುಮೋದನೆ ನೀಡಿತು ನಂತರ ಇದು ಬಂದದ್ದೇ ಕರುಳಿನ ಒಳಭಾಗ ಅಧ್ಯಯನ ಮಾಡುವ ಗ್ಯಾಸ್ಟ್ರೋ ಇಂಟೀರಿಯೋ ಲಾಜಿ ಕ್ಷೇತ್ರಕ್ಕೆ. ಈ ಕ್ಷೇತ್ರಕ್ಕೆ ಅದು ಮಹತ್ತರ ಕೊಡುಗೆಯನ್ನು ನೀಡಿದೆ.

ಈ ಕ್ಯಾಮೆರಾ ಪಿಲ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಕ್ಯಾಮೆರಾ ಪಿಲ್ ಒಂದು ವಿಟಮಿನ್ ಟ್ಯಾಬ್ಲೆಟ್ ನಷ್ಟು ಗಾತ್ರವಿದ್ದು ಅದನ್ನು ಸರಳವಾಗಿ ನುಂಗಬಹುದು. ಹೀಗೆ ನುಂಗಿದ ಈ ಕ್ಯಾಮೆರಾ ಪಿಲ್ ನಿಮ್ಮ ಅನ್ನನಾಳದ ಮೂಲಕ ಪ್ರಯಾಣ ಮಾಡಿ ನಿಮ್ಮ ಕರುಳನ್ನು ತಲುಪುತ್ತದೆ. ಹೀಗೆ ಅದು ಕರುಳನ್ನ ತಲುಪುವ ಮೊದಲು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಹಲವು ಫೋಟೋಗಳನ್ನು ಕ್ಲಿಕ್ಕಿಸುತ್ತದೆ. ಹೀಗೆ ಕ್ಲಿಕ್ಕಿಸಿದ ಈ ಫೋಟೋಗಳನ್ನು ಡಾಕ್ಟರ್ ಗಳು ನಿಮ್ಮ ಸೊಂಟಕ್ಕೆ ಕಟ್ಟಲಾದ ರೆಕಾರ್ಡಿಂಗ್ ಸಾಧನಕ್ಕೆ ಕಳುಹಿಸುತ್ತದೆ. ವೈದ್ಯರು ಈ ರೆಕಾರ್ಡಿಂಗ್ ಸಾಧನದಿಂದ ಕ್ಯಾಮೆರಾ ಪಿಲ್ ಕಳುಹಿಸಲ್ಪಟ್ಟ ಚಿತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ರೋಗಿಯ ರೋಗದ ಗುಣಲಕ್ಷಣಗಳ ಬಗ್ಗೆ ಅಧ್ಯಯನ ಮಾಡುತ್ತಾರೆ.
ಹೀಗೆ ನುಂಗಿದ ಕ್ಯಾಮೆರಾ ಪಿಲ್ ನಿಂದ ನಿಮ್ಮ ಕರುಳಿಗೆ ಅಥವಾ ಹೊಟ್ಟೆಗೆ ತೊಂದರೆ ಆಗುವುದಿಲ್ಲವೇ ಮತ್ತು ಅದನ್ನು ಹೇಗೆ ಹೊರಗೆ ತೆಗೆಯುತ್ತಾರೆ ಎಂಬಂತಹ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರುವುದು ಸಹಜ. ಹಲವು ರೀತಿಗಳಲ್ಲಿ ಇದನ್ನು ಪರೀಕ್ಷಿಸಿ ಸುರಕ್ಷಿತ ಎಂಬುದನ್ನ ಖಚಿತ ಪಡಿಸಿಕೊಂಡ ಮೇಲೆಯೇ ಇದನ್ನು ಸಾಮಾನ್ಯ ರೋಗಿಗಳ ಬಳಕೆಗೆ ಅನುಮೋದನೆ ನೀಡಲಾಗುತ್ತದೆ. ಹಾಗಾಗಿ ಈ ಗುಳಿಗೆಯನ್ನು ನೀವು ನುಂಗುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ, ಮತ್ತು ಇದನ್ನು ನೀವು ಸರಳವಾಗಿ ಮಲ ವಿಸರ್ಜನೆಯ ಮೂಲಕ ಹೊರ ಹಾಕಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಕ್ಯಾಮೆರಾ ಪಿಲ್ ನ ಇತರ ಉಪಯೋಗಗಳು :-
ಸಾಂಪ್ರದಾಯಿಕ ಶಸ್ತ್ರ ಚಿಕಿತ್ಸೆ ಮಾಡದೆ ರೋಗಿಯ ಶರೀರದ ಒಳಭಾಗವನ್ನು ನೋಡಲು ಬಳಸಲಾಗುತ್ತದೆ. ಸಾಮಾನ್ಯವಾಗಿ ಈಗ ಬಳಸಲಾಗುತ್ತಿರುವ ಎಂಡೊಸ್ಕೋಪಿ ಇಂದ ರೋಗಿಯ ಶರೀರದ ಒಳಭಾಗದ ನಿಖರ ರೋಗದ ಕಾರಣ ಪತ್ತೆ ಮಾಡುವುದು ಕಠಿಣವಾಗುತ್ತದೆ. ಹಾಗಾಗಿ ಈ ಕ್ಯಾಮರಾ ಪಿಲ್ ಬಳಕೆಯಿಂದ ಅದನ್ನು ನಿಖರವಾಗಿ ಪತ್ತೆ ಹಚ್ಚಿ ರೋಗವನ್ನು ಗುಣಮುಖ ಮಾಡುವಲ್ಲಿ ಇದು ಒಂದು ಮಹತ್ತರ ಪಾತ್ರವನ್ನು ವಹಿಸುತ್ತದೆ. ಇದನ್ನು ಇಂಟಸ್ಟೈನಲ್ ಬ್ಲೀಡಿಂಗ್ ಅಂದರೆ ಕರುಳಿನಲ್ಲಿ ರಕ್ತಸ್ರವವಾಗುವುದನ್ನು ಪತ್ತೆಹಚ್ಚಲು ಕೂಡ ಬಳಸುತ್ತಾರೆ.

ಇದರ ಮಿತಿಗಳು :-
ಒಂದೆಡೆ ಇ ಕ್ಯಾಮೆರಾ ಪಿಲ್ ವರದಾನ ಎಂದು ಸಾಬೀತಾಗಿದ್ದರೆ ಇನ್ನೊಂದೆಡೆ ಇದು ಕೆಲವು ಮಿತಿಗಳನ್ನು ಅಥವಾ ನಿರ್ಬಂಧಗಳನ್ನು ಹೊಂದಿದೆ ಅವು ಯಾವುವು ಎಂದರೆ : –
1) ಈ ಕೆಮೆರಾ ಪಿಲ್ ಅನ್ನು ನುಂಗಿದಾಗ ಅದು ಅನ್ನನಾಳದಲ್ಲಿಯೇ ಸಿಲುಕಿಕೊಳ್ಳುವ ಸಂಭವ ಇರುತ್ತದೆ. ಮುಂದೆ ಇದನ್ನು ವಿವಿಧ ರೀತಿಯ ಶಾಸ್ತ್ರ ಚಿಕಿತ್ಸೆ ಮಾಡಿ ತೆಗೆಯಬಹುದಾದ ಸನ್ನಿವೇಶಗಳು ಎದುರಾಗಬಹುದು.
2) ಕರುಳಿನ ಗಾತ್ರವು ದೊಡ್ಡದಾಗಿದ್ದು ಈ ಕ್ಯಾಮೆರಾ ಪಿಲ್ ಕರುಳಿನಲ್ಲಿರುವ ಎಲ್ಲ ರೀತಿಯ ದೋಷಗಳನ್ನು ಕಂಡುಹಿಡಿಯಲು ಅಸಾಧ್ಯ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಚಲಿತ ಕರುಳಿನ ದೋಷವನ್ನ ಗುರುತಿಸಬಲ್ಲ ಕೊಲನೋಸ್ಕೋಪಿ ಮತ್ತು ಸಾಂಪ್ರದಾಯಿಕ ಎಂಡೋಸ್ಕೋಪಿಗಳನ್ನು ಈ ಕ್ಯಾಮೆರಾ ಪಿಲ್ ಬದಲಿಸುತ್ತದೆಯೇ?
ಪ್ರಸ್ತುತ ಸಾಂಪ್ರದಾಯಿಕ ಎಂಡೊಸ್ಕೋಪಿ ಮತ್ತು ಕೊಲನೋಸ್ಕೋಪಿಗಳನ್ನು ಕರುಳ ದೋಷಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿರುವ ಎರಡು ವಿಧಾನಗಳನ್ನು ಗೋಲ್ಡನ್ ಸ್ಟ್ಯಾಂಡರ್ಡ್ ಎಂದು ಕರೆಯಲಾಗುತ್ತದೆ. ಆದರೆ ಭವಿಷ್ಯದಲ್ಲಿ ಕ್ಯಾಮೆರಾ ಪಿಲ್ ನಲ್ಲಿ ಹೆಚ್ಚು ಅನ್ವೇಷಣೆ ನಡೆದು ಇವೆರಡು ವಿಧಾನಗಳನ್ನು ಅದು ಬದಲಿಸಿ ಹೊಸ ವಿಧಾನವಾಗಿ ರೂಪುಗೊಳ್ಳಬಹುದು ಎಂದು ವಿಜ್ಞಾನಿಗಳು ಆಶಯವನ್ನು ವ್ಯಕ್ತಪಡಿಸಿದ್ದಾರೆ. ಶುಭ ಸಂದೇಶವೇನು ಗೊತ್ತಾ? ಅಂತಹ ಬೆಳವಣಿಗೆಗಳು ಈಗಾಗಲೇ ವಿಜ್ಞಾನದ ಅಂಗಳದಲ್ಲಿ ನಡೆದಿವೆ. ಪ್ರಸ್ತುತ 2014ರ ಸ್ಥಿತಿ ಗತಿಯ ಪ್ರಕಾರ ಕರುಳಿನ ನಿರ್ದಿಷ್ಟ ಭಾಗದ ದೋಷವನ್ನು ಪತ್ತೆ ಹಚ್ಚಿ ಅದಕ್ಕೆ ಔಷಧಿಗಳನ್ನ ನೀಡಲು ಸಹಕಾರಿಯಾಗುವ ಕ್ಯಾಮೆರಾ ಪಿಲ್ ಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ದೇಹದ ವಿವಿಧ ಭಾಗಗಳನ್ನು ಸ್ಕ್ಯಾನ್ ಮಾಡಿ ಅವುಗಳ ದೋಷವನ್ನು ಪತ್ತೆಹಚ್ಚಬಲ್ಲ ಕ್ಯಾಮೆರಾ ಪಿಲ್ ಗಳ ಮೇಲೂ ವಿಜ್ಞಾನಿಗಳು ಗಮನವನ್ನು ಕೇಂದ್ರೀಕರಿಸಿದ್ದಾರೆ. ಸದ್ಯದಲ್ಲೇ ಇದು ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ದಟ್ಟ ಆಗಿವೆ. ಕಾರಣ ಆರೋಗ್ಯ ಕ್ಷೇತ್ರ ಮತ್ತೊಂದು ಹಂತವನ್ನು ತಲುಪಲು ಸಿದ್ಧವಾಗಿದೆ.

ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನಮಸ್ಕಾರ.

Recent Posts

Bele Parihara Payment: ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯಾ ಚೆಕ್ ಮಾಡಿ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…

55 years ago

ಆಧಾರ್ ಕಾರ್ಡ್ ಹೊಂದಿದವರಿಗೆ ಮಹತ್ವದ ಮಾಹಿತಿ! ಈಗಲೇ ಈ ಕೆಲಸ ಮಾಡಿ!

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…

55 years ago

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರ ಕೊಡಲಿದೆ 20 ಕೋಳಿ ಮರಿ ಉಚಿತ ! ಈಗಲೇ ಅರ್ಜಿ ಸಲ್ಲಿಸಿ

ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…

55 years ago

Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ

ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…

55 years ago

PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ ! ಈಗಲೇ ಅರ್ಜಿ ಸಲ್ಲಿಸಿ

ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…

55 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

55 years ago