Categories: information

ಇವರೇ ನೋಡಿ ಭಾರತದ ಟಾಪ್ 5 ಶ್ರೀಮಂತ ವ್ಯಕ್ತಿಗಳು! ಇವರ ಆಸ್ತಿಯನ್ನು ನಿಮಗೆ ಎಣಿಸಲು ಕೂಡ ಆಗುವುದಿಲ್ಲ!

Spread the love

ಸ್ನೇಹಿತರೆ ನಮಗೆ ಚಿಕ್ಕವರಿಂದಲೂ ಸಾಕಷ್ಟು ಹಣ ಮಾಡಿ ದೇಶದ ನಂಬರ್ 1 ಶ್ರೀಮಂತ ಆಗಬೇಕು ಎಂಬ ಆಸೆ ಇರುತ್ತದೆ. ಇನ್ನು ಶ್ರೀಮಂತ ವ್ಯಕ್ತಿಗಳನ್ನು ನೋಡಿದರಂತೂ ಈ ಆಸೆ ಮತ್ತಷ್ಟು ಗರಿ ಗೆದರುತ್ತದೆ. ಹಾಗಾದರೆ ಬನ್ನಿ ಸ್ನೇಹಿತರೇ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ಭಾರತದ ಟಾಪ್ 5 ಶ್ರೀಮಂತರು ಯಾರು ಮತ್ತು ಅವರ ಆಸ್ತಿ ಎಷ್ಟು ಎಂದು ತಿಳಿದುಕೊಳ್ಳೋಣ..

Thank you for reading this post, don't forget to subscribe!

1 ನೇ ಸ್ಥಾನ : ಮುಖೇಶ್ ಅಂಬಾನಿ
ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕರಾದ ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿ 83.4 ಬಿಲಿಯನ್ ಡಾಲರ್ ಅಂದರೆ 8 ಲಕ್ಷ್ಯ ಕೋಟಿ ರೂಪಾಯಿ

2 ನೇ ಸ್ಥಾನ : ಗೌತಮ್ ಅದಾನಿ
ಅದಾನಿ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಗೌತಮ್ ಅದಾನಿ ಅವರ ಒಟ್ಟು ಆಸ್ತಿ 47.2 ಬಿಲಿಯನ್ ಡಾಲರ್. ಅಂದರೆ 4 ಲಕ್ಷ್ಯ ಕೋಟಿ ರೂಪಾಯಿ.

3 ನೇ ಸ್ಥಾನ : ಶಿವ ನಾಡರ್
HCL ಟೆಕ್ನಾಲಜಿ ಕಂಪನಿಯ ಮಾಲೀಕರಾದ ಶಿವ ನಾಡರ್ ಅವರ ಒಟ್ಟು ಆಸ್ತಿ 25.6 ಬಿಲಿಯನ್ ಡಾಲರ್.ಅಂದರೆ 2 ಲಕ್ಷ್ಯ ಕೋಟಿ ರೂಪಾಯಿ.

4 ನೇ ಸ್ಥಾನ : ಸೈರಸ್ ಪೂನಾವಾಲ
ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಮಾಲೀಕರಾದ ಸೈರಸ್ ಪೂನಾವಾಲ ಅವರ ಒಟ್ಟು ಆಸ್ತಿ 22.6 ಬಿಲಿಯನ್ ಡಾಲರ್.ಅಂದರೆ 1.8 ಲಕ್ಷ್ಯ ಕೋಟಿ ರೂಪಾಯಿ.

5 ನೇ ಸ್ಥಾನ : ಲಕ್ಷ್ಮೀ ಮಿತ್ತಲ್
ಅರ್ಸೆಲರ್ ಕಂಪನಿಯ ಮಾಲೀಕರಾದ ಲಕ್ಷ್ಮೀ ಮಿತ್ತಲ್ ಅವರ ಒಟ್ಟು ಆಸ್ತಿ 17.7 ಬಿಲಿಯನ್ ಡಾಲರ್.ಅಂದರೆ 1.4 ಲಕ್ಷ್ಯ ಕೋಟಿ ರೂಪಾಯಿ

ಇದನ್ನೂ ಓದಿ…

ಕರ್ನಾಟಕದ ಶ್ರೀಮಂತ ವ್ಯಕ್ತಿಗಳ ಪಟ್ಟಿ ಇಲ್ಲಿದೆ ನೋಡಿ :

1.ಅಜಿಮ್ ಪ್ರೇಮ್ ಜಿ : ವಿಪ್ರೊ ಕಂಪನಿಯ ಮಾಲೀಕರು ಇವರಾಗಿದ್ದು ಇವರ ಒಟ್ಟು ಆಸ್ತಿ 80,000 ಕೋಟಿ ರೂಪಾಯಿ ಆಗಿದೆ.

2. ನಾರಾಯಣ ಮೂರ್ತಿ : ಇನ್ಫೋಸಿಸ್ ಎಂಬ ದೈತ್ಯ ಕಂಪನಿಯ ಸಂಸ್ಥಾಪಕರಾದ ಇವರ ಒಟ್ಟು ಆಸ್ತಿ 36,000 ಕೋಟಿ ರೂಪಾಯಿ ಆಗಿದೆ.

3. ಕ್ರಿಸ್ ಗೋಪಾಲಕೃಷ್ಣ : ಇವರು ಇನ್ಫೋಸಿಸ್ ಕಂಪನಿಯ ಮತ್ತೊರ್ವ ಸಹ ಮಾಲೀಕರು ಆಗಿದ್ದು, ಇವರ ಒಟ್ಟು ಆಸ್ತಿ 26,000 ಕೋಟಿ ರೂಪಾಯಿ ಆಗಿದೆ.

4. ನಂದನ್ ನಿಲೇಕಣಿ : ಇನ್ಫೋಸಿಸ್ ಕಂಪನಿಯ ಸಹ ಮಾಲೀಕರು ಇವರು ಆಗಿದ್ದಾರೆ. ಇವರ ಒಟ್ಟು ಆಸ್ತಿ 24,000 ಕೋಟಿ ರೂಪಾಯಿ ಆಗಿದೆ.

5. ಬೈಜು ರವೀಂದ್ರನ್ ಮತ್ತು ದಿವ್ಯ ಗೋಕುಲನಾಥ್ : ಇವರು ಬೈಜೂಸ್ ಎಂಬ ಕಂಪನಿಯ ಮಾಲೀಕರು ಆಗಿದ್ದಾರೆ. ಇವರ ಒಟ್ಟು ಆಸ್ತಿ 21,000 ಕೋಟಿ ರೂಪಾಯಿ ಆಗಿದೆ.

ಇದನ್ನೂ ತಪ್ಪದೇ ಓದಿ!

ಯೋಗಿ ಅದಿತ್ಯನಾಥ್ ಅವರ ಸಂಪೂರ್ಣ ಜೀವನ ಚರಿತ್ರೆ! ತಪ್ಪದೇ ಓದಿ!

ಸ್ನೇಹಿತರೆ ಉತ್ತರ ಪ್ರದೇಶ. ಇದು ಜನಸಂಖ್ಯೆಯಲ್ಲಿ ಭಾರತದ ಅತಿ ದೊಡ್ಡ ರಾಜ್ಯವಾಗಿದೆ ಹಿಂದೊಮ್ಮೆ ಈ ಹೆಸರು ಕೇಳಿದರೆ ಸಾಕು ಅದು ಗುಂಡಾಗಳ ಮಾಫಿಯಾಗಳ ರಾಜ್ಯ ಎಂದು ಬೆರಳು ತೋರಿಸುತಿದ್ದವರೇ ಹೆಚ್ಚು. ಈ ರಾಜ್ಯ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಾರಣ ಏನು ಗೊತ್ತಾ ಯಾವ ಗುಂಡಾಗಿರಿ ಮಾಫಿಯಾದಿಂದ ಉತ್ತರ ಪ್ರದೇಶಕ್ಕೆ ಕಳಂಕ ತಂದಿದ್ದ ಮಾಫಿಯಾ ಡಾನ್ ಗಳನ್ನು  ಸಾರ್ವಜನಿಕವಾಗಿ ಮತ್ತು ಬಹಿರಂಗವಾಗಿ ಎನ್ಕೌಂಟರ್ ಮಾಡಿ ಬಿಸಾಡಿದ್ದಕ್ಕೆ. ಹೌದು ಸ್ನೇಹಿತರೇ, ಹಿಂದೊಮ್ಮೆ ಸಾರ್ವಜನಿಕವಾಗಿ ಗುಂಡಿನ ಮೊರೆತ ಕೇಳಿದರೆ ಅದು ಗೂಂಡಾಗಳ ಅಟ್ಟಹಾಸವೆಂದು ಭಾವಿಸಲಾಗುತ್ತಿತ್ತು ಮತ್ತು ಜನಸಾಮಾನ್ಯರಲ್ಲಿ ಆತಂಕ ಮನೆ ಮಾಡುತ್ತಿತ್ತು. ಆದರೆ ಇಂದು ಸಾರ್ವಜನಿಕವಾಗಿ ಗುಂಡಿನ ಸದ್ದು ಕೇಳಿದರೆ ಸಾಕು ಜನ ನಿರಾತಂಕವಾಗಿ ಇದು ಯೋಗಿ ಸರ್ಕಾರವೆಂದು ಹೆಮ್ಮೆಯಿಂದ ಹೇಳುತ್ತಾರೆ. ಹಾಗಾದರೆ ಮಾಫಿಯಾ ದಾನಗಳಿಂದ ಹೆದರುತ್ತಿದ್ದ ಉತ್ತರ ಪ್ರದೇಶದ ಜನತೆಗೆ ಹೀಗೆ ಏಕಾಏಕಿ ಧೈರ್ಯ ಬರಲು ಕಾರಣವೇನು ಮತ್ತು ಅತಿ ಕಡಿಮೆ ಸಮಯದಲ್ಲಿ ದೇಶದ ಅತ್ಯುತ್ತಮ ರಾಜ್ಯವಾಗಿ ಹೊರಹೊಮ್ಮಲು ಕಾರಣ ಯಾರೆಂದು ಕೇಳಿದರೆ ಕೇವಲ ಒಬ್ಬ ಕಾವಿಧಾರಿ ಸನ್ಯಾಸಿ ಎಂದರೆ ನೀವು ನಂಬಲೇಬೇಕು. ಆ ಸನ್ಯಾಸಿ ಬೇರೆ ಯಾರು ಅಲ್ಲ ಆತ ಯೋಗಿ ಆದಿತ್ಯನಾಥ. ಉತ್ತರ ಪ್ರದೇಶದ ರಾಜಕೀಯ ಇತಿಹಾಸದಲ್ಲಿಯೇ ಎರಡನೇ ಬಾರಿ ಬಹುಮತದಿಂದ ಪ್ರಚಂಡವಾಗಿ ಆಯ್ಕೆಯಾದ ಪ್ರಥಮ ಮುಖ್ಯ ಮಂತ್ರಿ ಎಂಬ ಹೆಗ್ಗಳಿಕೆ ಹೊಂದಿರುವ ಈ ಧೀರ ಸನ್ಯಾಸಿ ಕೇವಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಷ್ಟೇ ಅಲ್ಲದೆ ಯೋಗವಾಣಿ ಎಂಬ ಹಿಂದಿ ಮಾಸಪತ್ರಿಕೆಯ ಪ್ರಧಾನ ಸಂಪಾದಕರು ಮತ್ತು ಗೋರಖಪುರದ ಗೋರಖನಾಥ ಮಂದಿರದ ಮಹಾಂತರು ಆಗಿದ್ದಾರೆ. ಇದಷ್ಟೇ ಅಲ್ಲದೆ ಇವರು ದೇಶದಲ್ಲಿಯೇ ಅತಿ ಕಡಿಮೆ ವಯಸ್ಸಿನಲ್ಲಿ ಸಂಸದರಾದ ಹೆಗ್ಗಳಿಕೆ ಹೊಂದಿದ್ದಾರೆ. ಹೀಗೆ ಯೋಗಿ ಆದಿತ್ಯನಾಥ ಅವರ ಜೀವನಕ್ಕೆ ಸಂಬಂಧಪಟ್ಟ ಅನೇಕ ಕುತೂಹಲಕಾರಿ ವಿಷಯಗಳನ್ನು ಇವತ್ತಿನ ಈ ಆರ್ಟಿಕಲ್ ನಲ್ಲಿ ನೋಡೋಣ ಬನ್ನಿ.

ಸ್ನೇಹಿತರೆ ಯೋಗಿ ಆದಿತ್ಯನಾಥ ಅವರ ಜನನ ಜೂನ್ 5, 1972ರಂದು ಉತ್ತರಖಂಡದ ಪೌಡಿ ಘಡವಾಲ ಜಿಲ್ಲೆಯ ಪಂಚುರಾ ಎಂಬ ಗ್ರಾಮದಲ್ಲಿ ಒಂದು ರಾಜಪೂತ ಮನೆತನದಲ್ಲಿ ಆಯಿತು. ಅವರ ಬಾಲ್ಯದ ಹೆಸರು ಅಜಯ ಸಿಂಗ ಬಿಷ್ಟ್ ಎಂದಿತ್ತು. ಮುಂದೆ ಸನ್ಯಾಸತ್ವದ ದೀಕ್ಷೆಯನ್ನು ಪಡೆದ ನಂತರ ಯೋಗಿ ಆದಿತ್ಯನಾಥ ಎಂದು ಬದಲಾಯಿತು. ಇವರ ತಂದೆಯ ಹೆಸರು ಆನಂದ ಸಿಂಗ ಬಿಷ್ಟ ಮತ್ತು ಅವರ ತಾಯಿಯ ಹೆಸರು ಸಾವಿತ್ರಿ ದೇವಿ ಎಂದಾಗಿತ್ತು. ಅವರ ತಂದೆ ಓರ್ವ ಅರಣ್ಯಾಧಿಕಾರಿ ಆಗಿದ್ದರು. 2020ರ ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಅವರ ತಂದೆ ಕೊರೊನಾಗೆ ತುತ್ತಾಗಿ ತೀರಿ ಹೋದರು. ಯೋಗೀಜೀಯವರ ಕುಟುಂಬದ ಬಗ್ಗೆ ಹೇಳುವುದಾದರೆ ನಾಲ್ಕು ಜನ ಸಹೋದರರು ಮತ್ತು ಮೂರು ಜನ ಸಹೋದರಿಯರ ಒಟ್ಟು ಏಳು ಜನ ಮಕ್ಕಳಲ್ಲಿ ಯೋಗೀಜಿಯು ಎರಡನೆಯವರಾಗಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೌಡಿ ಗಡವಾಲನ ಸ್ಥಳೀಯ ಶಾಲೆಗಳಲ್ಲಿ ಮುಗಿಸಿದರು. ಮುಂದೆ ಇಂಟರ್ಮೀಡಿಯಟ್ ಶಿಕ್ಷಣವನ್ನು ರಿಷಿಕೇಶನ ಶ್ರೀ ಭಾರತ ಮಂದಿರ ಇಂಟರ್ಮೀಡಿಯಟ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಂತರ ಅವರು ಶ್ರೀನಗರದ ಹೇಮಾವತಿ ನಂದನ ಬಹುಗುಣ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಗಣಿತದಲ್ಲಿ ತಮ್ಮ ಡಿಗ್ರಿಯನ್ನು ಪೂರೈಸಿದರು. ನಂತರ ಅವರು ಎಂಎಸ್ಸಿಗಾಗಿ ಕಾಲೇಜಿಗೆ ಅಡ್ಮಿಷನ್ ಕೂಡ ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ರಾಮಮಂದಿರಕ್ಕಾಗಿ ನಡೆಯುತ್ತಿದ್ದ ಚಳುವಳಿಯುತ್ತ ಇವರ ಧ್ಯಾನ ಆಕರ್ಷಿತವಾದ ಕಾರಣ ಕಾಲೇಜನ್ನು ಅರ್ಧಕ್ಕೆ ಬಿಟ್ಟರು. ಯೋಗಿಜಿಯವರು 1998ರಲ್ಲಿ ಅಧಿಕೃತವಾಗಿ ರಾಜಕೀಯವನ್ನು ತಮ್ಮ ಕರಿಯರಾಗಿ ಮಾಡಿಕೊಂಡರೂ ಶಾಲಾ ಕಾಲೇಜುಗಳಲ್ಲಿಯೇ ಅವರಿಗೆ ರಾಜಕೀಯದಲ್ಲಿ ಒಲವು ಹೆಚ್ಚಿತ್ತು. ಕಾಲೇಜು ದಿನಗಳಲ್ಲಿ ಅವರು ಎಬಿವಿಪಿ ಅಂದ್ರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿಗೆ ಸೇರಿಕೊಂಡರು. ನಂತರ ಎಬಿವಿಪಿಯ ಉದಯೋನ್ಮುಖ ವಿದ್ಯಾರ್ಥಿ ನಾಯಕರ ಪಟ್ಟಿಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ವಿದ್ಯಾರ್ಥಿಯ ಚುನಾವಣೆಗೆ ನಿಲ್ಲಲು ಮುಂದಾದರು. ಆದರೆ ಎಬಿವಿಪಿ ಅವರಿಗೆ ಟಿಕೆಟ್ ನೀಡಲಿಲ್ಲ. ಟಿಕೆಟ್ ಸಿಗದಿದ್ದರೂ ಅವರು ನಿರ್ಧರಿಯ ಅಭ್ಯರ್ಥಿಯಾಗಿ ನಿಂತು ಆ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಸ್ನೇಹಿತರೆ ಇಲ್ಲಿಯವರೆಗೆ ಯೋಗಿಜೀ ಅವರ ಜೀವನ ಎಲ್ಲರಂತೆ ಇತ್ತು. ಅವರು ಕೂಡ ಉನ್ನತ ಶಿಕ್ಷಣ ಪಡೆದು ಸರ್ಕಾರಿ ನೌಕರಿ ಒಂದನ್ನು ಪಡೆಯಲು ಬಯಸಿದ್ದರು. ಆದರೆ ಅಚಾನಕ್ಕಾಗಿ ಅವರ ಜೀವನದಲ್ಲೊಂದು ಘಟನೆ ಸಂಭವಿಸಿತು. ಅದು ಅವರ ಜೀವನದ ಚಿತ್ರಣವನ್ನೇ ಬದಲಿಸಿಬಿಟ್ಟಿತು.
ಸ್ನೇಹಿತರೆ ಆ ಘಟನೆ ಏನೆಂದರೆ ವರ್ಷ 1990ರಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಚಳುವಳಿ ನಡೆದ ಸಂದರ್ಭದಲ್ಲಿ ಯೋಗಿಜೀಯು ರಾಮಮಂದಿರ ಸ್ಥಾಪನೆಯ ಪರವಾಗಿ ನಿಂತು ಚಳುವಳಿಯಲ್ಲಿ ಧುಮುಕಿದ್ದರು. ಅದೇ ಸಮಯದಲ್ಲಿ ಅವರಿಗೆ ಗೋರಖಾಪುರದ ಗೋರಖನಾಥ ಮಂದಿರದ ಪ್ರಧಾನ ಪೀಠಾಧೀಶರು ಮತ್ತು ಪೂಜಾರಿಗಳು ಆದ ಮಹಾಂತ ಅವೈದ್ಯನಾಥರ ಪರಿಚಯವಾಗುತ್ತದೆ. ಮುಂದೆ ಇವರಿಬ್ಬರ ಗುರು ಶಿಷ್ಯರ ಸಂಬಂಧ ಅದೆಷ್ಟು ಗಾಢವಾಗುತ್ತದೆಂದರೆ ಯೋಗೀಜಯು ಕೇವಲ 21 ವರ್ಷದ ವಯಸ್ಸಿನಲ್ಲಿಯೇ ಸಂಸಾರಿಕ ಜೀವನವನ್ನು ತೊರೆದು ಸನ್ಯಾಸ ದೀಕ್ಷೆಯನ್ನು ಪಡೆದು ತಮ್ಮ ಗುರುಗಳ ಸೇವೆಯಲ್ಲಿ ತನ್ನ ಮುಂದಿನ ಜೀವನವನ್ನ ಸವೆಸುತ್ತೇನೆ ಎಂದು ನಿರ್ಧರಿಸುತ್ತಾರೆ. ಹೀಗೆ ತನ್ನ ಶಿಷ್ಯನಲ್ಲಿ ಸಮಾಜ ಸೇವೆಗಾಗಿ ಸನ್ಯಾಸತ್ವವನ್ನು ಸ್ವೀಕರಿಸಲು ಪುಟ್ಟಿಯುತ್ತಿದ್ದ ಆತನ ಒಳ ಮನಸ್ಸನ್ನು ಅರಿತ ಮಹಾಂತ ಅವೈದ್ಯನಾಥರು ಫೆಬ್ರುವರಿ 15 1994 ರಂದು ನಾಥ ಸಂಪ್ರದಾಯದ ಪ್ರಕಾರ ದೀಕ್ಷೆಯನ್ನು ನೀಡಿ, ಯೋಗಿಜೀ ಅವರನ್ನು ತಮ್ಮ ಶಿಷ್ಯರನ್ನಾಗಿಸಿಕೊಂಡರು. ಇದೇ ಸಂದರ್ಭದಲ್ಲಿ ಅವರ ಹೆಸರನ್ನು ಅಜಯ್ಸಿಂಗ ಬದಲಾಗಿ ಯೋಗಿ ಆದಿತ್ಯನಾಥ ಎಂದು ಮರುನಾಮಕರಣ ಮಾಡಲಾಯಿತು. ಇದಾದ ನಂತರ ಯೋಗಿಜೀಯು ಶುದ್ಧ ಮನಸ್ಸಿನಿಂದ ತಮ್ಮ ಗುರು ಸೇವೆಯಲ್ಲಿ ನಿರತರಾಗಿ, ಆಶ್ರಮದ ಎಲ್ಲಾ ಕಾರ್ಯಭಾರವನ್ನು ತಮ್ಮ ಹೆಗಲಿಗೆ ಹಾಕಿಕೊಂಡರು. ಯೋಗೀಜಿಯವರ ಪ್ರಾಮಾಣಿಕ ಗುರು ಸೇವೆಯನ್ನ ಮನಗಂಡ ಮಹಾಂತ ಅವೈದ್ಯನಾಥರು ಯೋಗೀಜೀಯನ್ನ ತಮ್ಮ ಉತ್ತರಾಧಿಕಾರಿಯಂದು ಘೋಷಣೆ ಮಾಡಿದರು.

ಸ್ನೇಹಿತರೆ ಈ ಮಹಾಂತ ಅವೈದ್ಯನಾಥರು ಕೇವಲ ಗೋರಖನಾಥ ಮಂದಿರದ ಪ್ರಧಾನ ಪೂಜಾರಿ ಅಷ್ಟೇ ಆಗಿರಲಿಲ್ಲ ಅವರು ಹಿಂದೂ ಮಹಾಸಭೆಯ ಪ್ರಮುಖ ಸದಸ್ಯರು ಮತ್ತು ಘೋರಕಪುರದ ಬಿಜೆಪಿಯ ನಾಲ್ಕು ಬಾರಿ ಸಂಸದರು ಆಗಿದ್ದರು. ವರ್ಷ 1998ರ ಲೋಕಸಭಾ ಚುನಾವಣೆಯಲ್ಲಿ ಮಹಾಂತ ಅವೈದ್ಯನಾಥರು ತಮ್ಮ ಸ್ವಸ್ಥಾನವಾದ ಗೋರಕಪುರ ಕ್ಷೇತ್ರಕ್ಕೆ ಯೋಗಿ ಆದಿತ್ಯನಾಥರನ್ನು ಚುನಾವಣೆಗೆ ನಿಲ್ಲಿಸಲು ನಿರ್ಧರಿಸಿದರು. ತಮ್ಮ ಗುರುಗಳ ಈ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ ಯೋಗಿಜೀಯು 1998ರಲ್ಲಿ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಪ್ರವೇಶಿಸಿದರು. ಈ ಚುನಾವಣೆಯಲ್ಲಿ ಯೋಗಿಜೀಯು ಪ್ರಚಂಡ ಬಹುಮತದಿಂದ ಆಯ್ಕೆಯಾದರಲ್ಲದೆ ಕೇವಲ 26ರ ವಯಸ್ಸಿನಲ್ಲಿಯೇ ಸಂಸತ್ತಿನ ಸದಸ್ಯರಾದ ಅತಿ ಕಿರಿಯ ಎಂಪಿ ಎಂಬ ಹೆಗ್ಗಳಿಕೆಯನ್ನು ಪಡೆದರು. 1998 ರಿಂದ 2017ರವರೆಗೆ ಅವರು ಬರೋಬ್ಬರಿ ಐದು ಬಾರಿ ಗೋರಖಪುರದ ಸಂಸದರಾಗಿ ದಾಖಲೆಯನ್ನು ಬರೆದರು ಯೋಗೀಜಿಯು ಸಂಸದರಾಗಿ ಹಲವು ಕಾರ್ಯಗಳನ್ನು ಮಾಡಿದ್ದರು ಅವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿದ್ದು ಮಾತ್ರ 2017ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ. ಗೆಳೆಯರೇ 2018ರ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ವಿ ಪಕ್ಷದ ವಿರುದ್ಧ ಸೋಲುಂಡ ಬಳಿಕ ಬಿಜೆಪಿಯ ವರ್ಚಸ್ಸು ಕುಗ್ಗಿತ್ತು ಹೀಗಾಗಿ 2017ರ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಬೇಕೆಂಬ ಸವಾಲು ಬಿಜೆಪಿಯ ಹೈಕಮಾಂಡ್ಗೆ ತಲೆ ನೋವಾಗಿ ಪರಿಣಮಿಸಿತ್ತು. ಆದರೆ ಈ ತಲೆ ನೋವಿಗೆ ಸೂಕ್ತ ಪರಿಹಾರ ಕೆಲವೇ ದಿನಗಳಲ್ಲಿ ಅಂದು ಬಿಜೆಪಿ ಹೈಕಮಾಂಡ್ಗೆ ಸಿಕ್ಕಿತ್ತು. ವರ್ಷ 2016ರಲ್ಲಿ ಗೋರಖನಾಥ ಮಂದಿರದಲ್ಲಿ ನಡೆದ ಆರ್ ಎಸ್ ಎಸ್ ಮತ್ತು ಬಿಜೆಪಿ ಹೈಕಮಾಂಡ್ ಸಭೆಯಲ್ಲಿ ಯೋಗಿ ಆದಿತ್ಯನಾಥ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ನಿರ್ಧರಿಸಲಾಯಿತು. ಹೀಗೆ ಯೋಗಿಜೀಯ ನೇತೃತ್ವದಲ್ಲಿ ಬಿಜೆಪಿಯು ಪ್ರಚಂಡ ಬಹುಮತಗಳಿಂದ ಆಯ್ಕೆಯಾಗಿ ಸರ್ಕಾರವನ್ನ ರಚಿಸಿದ್ದು ನಿಮಗೆಲ್ಲ ಗೊತ್ತಿದೆ. ಯೋಗಿಜೀಯು ಕೇವಲ ಮುಖ್ಯಮಂತ್ರಿ ಅಷ್ಟೇ ಅಲ್ಲದೆ ಘೋರಘನಾಥ ಮಂದಿರದ ಪ್ರಧಾನ ಪೀಠಾಧೀಶರು ಮತ್ತು ಮಹಾಂತರು ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಷ 2014ರಲ್ಲಿ ಅವರ ಗುರುಗಳ ದೇಹಂತ್ಯವಾದ ನಂತರ ಅವರ ಉತ್ತರಾಧಿಕಾರಿಯಾಗಿ ಅವರು ಈ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದ್ದಾರೆ.ಉತ್ತರ ಪ್ರದೇಶದಲ್ಲಿ ತಾಂಡವ ಆಡುತ್ತಿದ್ದ ಮಾಫಿಯಾ ಮತ್ತು ಗೂಂಡಾಗಿರಿಯನ್ನು ಅವರು ಯಶಶ್ವಿಯಾಗಿ ಮಟ್ಟ ಹಾಕುವ ಮೂಲಕ ಬುಲ್ದೊಜರ್ ಬಾಬಾ ಎಂಬ ಹೆಸರಿನೋಡೆಗೆ ಖ್ಯಾತಿಯನ್ನು ಹೊಂದಿದ್ದಾರೆ. ಹಿಂದುತ್ವವನ್ನೇ ತಮ್ಮ ಜೀವಾಳ ಮಾಡಿಕೊಂಡಿರುವ ಯೋಗಿಜೀ ಹಿಂದೂ ಫೈರ್ ಬ್ರಾಂಡ್ ಎಂದು ಜನ ಮಾನಸದಲ್ಲಿ ಹೆಸರು ಗಳಿಸಿದ್ದಾರೆ.

ಇದರ ಜೊತೆಗೆ ಯೋಗಿಜಿಯೂ ಯೋಗವಾಣಿ ಎಂಬ ಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕರು ಆಗಿದ್ದಾರೆ. ಅಷ್ಟೇ ಅಲ್ಲದೆ ಯೋಗಿಕ ಷಟ್ಕರ್ಮ, ಹಠಯೋಗ, ಹಿಂದೂ ರಾಷ್ಟ್ರ ನೇಪಾಳ, ರಾಜಯೋಗ, ವರ್ತಮಾನ ಮತ್ತು ಭವಿಷ್ಯ ಎಂಬ ಹಲವು ಕೃತಿಗಳನ್ನು ರಚಿಸಿದ್ದಾರೆ. ಇನ್ನು ಯೋಗಿಜೀಯವರ ಜೀವನಶೈಲಿ ಬಗ್ಗೆ ಹೇಳುವುದಾದರೆ ಅವರು ಯಾವಾಗಲೂ ಸರಳ ಜೀವನವನ್ನು ಜೀವಿಸಲು ಇಷ್ಟಪಡುತ್ತಾರೆ. ಅವರು ಸದಾ ಕೇಸರಿ ಬಣ್ಣದ ಕುರ್ತಾವನ್ನಾ ಧರಿಸಿರುವುದನ್ನ ನೀವು ನೋಡಿಯೇ ಇರುತ್ತೀರಿ. ಯೋಗೀಜಿಯವರ ಕುರಿತಂತೆ ವಿಶೇಷವಾಗಿ ಹೇಳಬೇಕೆಂದರೆ ಅವರು ಬೆಕ್ಕು ನಾಯಿ ಮಂಗಗಳು ಮತ್ತು ಗೋವುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ವಿಶೇಷವಾಗಿ ಅವರು ಗೋಮಾತೆಗಳ ಕುರಿತಂತೆ ಹೆಚ್ಚು ಪ್ರೀತಿಯನ್ನು ಹೊಂದಿದ್ದಾರೆ. ಹೀಗಾಗಿ ಅವರು ಪ್ರತಿ ದಿನ ಬೆಳಿಗ್ಗೆ ತಮ್ಮ ಕೈಯಾರೆ ಅವುಗಳಿಗೆ ಆಹಾರವನ್ನು ತಿನ್ನಿಸುತ್ತಾರೆ ಅಷ್ಟೇ ಅಲ್ಲದೆ ಅವರು ದಿನದ ಅಂತ್ಯದಲ್ಲಿ ಸರ್ಕಾರಿ ಕೆಲಸಗಳನ್ನೆಲ್ಲ ಮುಗಿಸಿದ ಮೇಲೆ ಅವರು ತಮ್ಮ ಗೋಶಾಲೆಗೆ ಹೋಗಿ ಗೋಮಾತೆಯ ಸೇವೆಯನ್ನು ಮಾಡುತ್ತಾರೆ. ಸದ್ಯ ಯೋಗಿಜೀ ಅವರಿಗೆ 41 ವರ್ಷ ವಯಸ್ಸು ಈಗಾಗಲೇ ಅವರು ಎರಡನೇ ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭವಿಷ್ಯದಲ್ಲಿ ಅವರು ಮೋದಿಜಿಯವರ ಉತ್ತರಾಧಿಕಾರಿಯಾಗಿ ಪ್ರಧಾನಮಂತ್ರಿಯ ಪಟ್ಟಕ್ಕೆ ಏರಬಹುದು ಎಂಬ ಊಹಾಪೋಹಗಳು ಅಲ್ಲಲ್ಲಿ ಸದ್ದು ಮಾಡುತ್ತಿವೆ. ಯೋಗಿಜೀ ಪ್ರಧಾನಿಯಾಗುವುದರ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಸ್ನೇಹಿತರೆ ಇದು ಇವತ್ತಿನ ವಿಶೇಷವಾಗಿತ್ತು. ಮತ್ತೊಂದು ವಿಶೇಷ ಮಾಹಿತಿಯೊಂದಿಗೆ ನಾನು ನಿಮ್ಮನ್ನು ಮುಂದಿನ ಆರ್ಟಿಕಲ್ ನಲ್ಲಿ ಸಿಗುತ್ತೇನೆ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ.

ಸ್ನೇಹಿತರೆ ಈ ಆರ್ಟಿಕಲ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Recent Posts

Bele Parihara Payment: ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯಾ ಚೆಕ್ ಮಾಡಿ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…

55 years ago

ಆಧಾರ್ ಕಾರ್ಡ್ ಹೊಂದಿದವರಿಗೆ ಮಹತ್ವದ ಮಾಹಿತಿ! ಈಗಲೇ ಈ ಕೆಲಸ ಮಾಡಿ!

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…

55 years ago

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರ ಕೊಡಲಿದೆ 20 ಕೋಳಿ ಮರಿ ಉಚಿತ ! ಈಗಲೇ ಅರ್ಜಿ ಸಲ್ಲಿಸಿ

ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…

55 years ago

Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ

ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…

55 years ago

PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ ! ಈಗಲೇ ಅರ್ಜಿ ಸಲ್ಲಿಸಿ

ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…

55 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

55 years ago