ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಒಂದು ಮನರಂಜನೆಯ ತಾಣವಾಗಿ ಉಳಿಯದೆ ಅದು ಸಾಕಷ್ಟು ಜನರ ಹೊಟ್ಟೆಯನ್ನು ತುಂಬಿಸುತ್ತಿದೆ. ಹೆಚ್ಚಾಗುತ್ತಿರುವ ನಿರುದ್ಯೋಗದಿಂದ ಬೇಸತ್ತು, ಹಲವರು ಇದನ್ನೇ ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಹೀಗೆ ಕನ್ನಡದಲ್ಲಿ ಯಾವ ಯೌಟ್ಯೂಬರ್ ಗಳು ಎಷ್ಟು ಆದಾಯ ಗಳಿಸುತ್ತಾರೆ ಎಂದು ನಾವು ಲೆಕ್ಕ ಮಾಡಿದಾಗ ನಮಗೆ ದೊರೆತ ಫಲಿತಾಂಶ ಇಲ್ಲಿದೆ. ಇಲ್ಲಿ ಹೇಳಲಾಗಿರುವ ಆದಾಯ ಗೂಗಲ್ ನ ರೂಲ್ಸ್ ಪ್ರಕಾರ ಅಂದಾಜಿಸಲಾಗಿದೆ.ಹಾಗಾದರೆ ಬನ್ನಿ ಸ್ನೇಹಿತರೇ ಕನ್ನಡದ ಶ್ರೀಮಂತ ಯೌಟ್ಯೂಬರ್ ಗಳು ಯಾರು ಎಂಬುದನ್ನ ಈ ಅರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ.
1. ಡಾಕ್ಟರ್ ಬ್ರೋ : ಪ್ರಪಂಚದ ತುಂಬಾ ಪ್ರಯಾಣ ಮಾಡಿ ಅಲ್ಲಿನ ವಿಚಿತ್ರ ಸಂಗತಿಗಳನ್ನು ತೋರಿಸುವ ಈ ಚಾನೆಲ್ ಸದ್ಯ 1.6 ಮಿಲಿಯನ್ subscribers ಗಳನ್ನ ಹೊಂದಿದ್ದು ಇವರ ತಿಂಗಳ ಆದಾಯ ಅಂದಾಜು 12 ಲಕ್ಷ ರೂಪಾಯಿ.
2. ಮಲ್ಲು ಜಮಖಂಡಿ : ಟಿಕ್ ಟಾಕ್ ನಲ್ಲಿ ಕಾಮಿಡಿ ವಿಡಿಯೋ ದಿಂದ ಜನಪ್ರಿಯವಾಗಿದ್ದ ಮತ್ತೊರ್ವ ಉತ್ತರ ಕರ್ನಾಟಕ ಪ್ರತಿಭೆ ಮಲ್ಲು ಜಮಖಂಡಿ. ಕಾಮಿಡಿ ವಿಡಿಯೋ ಗಳ ಮೂಲಕ ಜನರನ್ನು ನಗಿಸುತ್ತಿರುವ, ಸದ್ಯ 1.5 ಮಿಲಿಯನ್ subscribers ಹೊಂದಿರುವ ಇವರ ತಿಂಗಳ ಆದಾಯ ಅಂದಾಜು 12 ಲಕ್ಷ ರೂಪಾಯಿ.
3.ಶಿವಪುತ್ರ ಯಶಾರದ ಕಾಮಿಡಿ ಶೋ : ಮುಂಚೆ ಟಿಕ್ ಟಾಕ್ ನಲ್ಲಿ ಕಾಮಿಡಿ ವಿಡಿಯೋ ಮಾಡಿ ಫೇಮಸ್ ಆಗಿದ್ದ ಶಿವಪುತ್ರ ಎಂಬ ಉತ್ತರ ಕರ್ನಾಟಕದ ಪ್ರತಿಭೆ ಸ್ನೇಹಿತರ ಸಲಹೆಯ ಮೇರೆಗೆ ಯೂಟ್ಯೂಬ್ ಗೆ ಬರುತ್ತಾರೆ. ಸದ್ಯ 1.47 ಮಿಲಿಯನ್ subscribers ಗಳನ್ನ ಹೊಂದಿರುವ ಇವರ ತಿಂಗಳ ಆದಾಯ ಅಂದಾಜು 11 ಲಕ್ಷ ರೂಪಾಯಿ.
4. ಮೀಡಿಯಾ ಮಾಸ್ಟರ್ಸ್ : ಪ್ರಚಲಿತ ಘಟನೆಗಳು, ರಾಜಕೀಯ, ಅಂತಾರಾಷ್ಟ್ರೀಯ ಸುದ್ದಿಗಳ ಬಗ್ಗೆ ವಿಡಿಯೋ ಗಳನ್ನು ಅಪ್ಲೋಡ್ ಮಾಡುವ ಈ ಚಾನೆಲ್ ನ ಮಾಲೀಕರ ಹೆಸರು ರಾಘವೇಂದ್ರ. ಮುಂಚೆ tv9 ನಲ್ಲಿ, ಸುವರ್ಣ ನ್ಯೂಸ್ ನಲ್ಲಿ ನಿರೂಪಕರಾಗಿ ಕೆಲಸ ಮಾಡಿರುವ ಇವರ ಚಾನೆಲ್ ನ ತಿಂಗಳ ಆದಾಯ ಅಂದಾಜು 8-9 ಲಕ್ಷ ರೂಪಾಯಿ.
5. ಚರಿತ್ರೆ : ನಿರೂಪಕನಾಗಬೇಕೆಂದು ಬೆಂಗಳೂರಿಗೆ ಬಂದಿದ್ದ ನಿತಿನ್ ಎಂಬ ಯುವಕನನ್ನ ಟಿವಿ ಚಾನೆಲ್ ಗಳು ನಿರಾಕರಿಸಿದಾಗ ಸ್ನೇಹಿತನ ಸಲಹೆ ಮೇರೆಗೆ ಹುಟ್ಟಿಕೊಂಡ ಚಾನೆಲ್ ಇದು. ಇಂದಿಗೆ ಬರೋಬ್ಬರಿ 1.17 ಮಿಲಿಯನ್ subscribers ಗಳನ್ನು ಹೊಂದಿರುವ ಈ ಚಾನೆಲ್ ನ ತಿಂಗಳ ಆದಾಯ 8-9 ಲಕ್ಷ ರೂಪಾಯಿ.
6. ಯುವರಾಜ ಮಾಧ : ಸ್ಪೋಕನ್ ಇಂಗ್ಲಿಷ್ ಮತ್ತು ಕಂಪ್ಯೂಟರ್ ಬಗ್ಗೆ ಮಾಹಿತಿ ನೀಡುವ ಈ ಚಾನೆಲ್ ಸದ್ಯ 1.2 ಮಿಲಿಯನ್ subscribers ಗಳನ್ನ ಹೊಂದಿದ್ದು ಇವರ ತಿಂಗಳ ಆದಾಯ ಅಂದಾಜು 8-9 ಲಕ್ಷ ರೂಪಾಯಿ.
7. ಮಸ್ತ್ ಮಗಾ: ದಿನನಿತ್ಯದ ಆಗು ಹೋಗುಗಳ ಬಗ್ಗೆ ಮಾಹಿತಿ ನೀಡುವ ಈ ಚಾನೆಲ್ ಸ್ವಂತ ಪತ್ರಿಕೋದ್ಯಮವಾಗಿದ್ದು ಸದ್ಯ 1.7 ಮಿಲಿಯನ್ subscribers ಗಳನ್ನು ಹೊಂದಿದ್ದು ಇವರ ತಿಂಗಳ ಆದಾಯ ಅಂದಾಜು 6-7 ಲಕ್ಷ ರೂಪಾಯಿ.
8. ಕನ್ನಡ ಟೆಕ್ ಫಾರ್ ಯು : ಪ್ರಚಲಿತ ಘಟನೆಗಳು ಮತ್ತು ಇತಿಹಾಸದ ಬಗ್ಗೆ ವಿಡಿಯೋ ಅಪ್ಲೋಡ್ ಮಾಡುವ ಈ ಚಾನೆಲ್ ಸದ್ಯ 1.65 ಮಿಲಿಯನ್ subscribers ಗಳನ್ನ ಹೊಂದಿದ್ದು, ಇವರ ತಿಂಗಳ ಆದಾಯ ಅಂದಾಜು 7 ಲಕ್ಷ ರೂಪಾಯಿ.
9. ಕೆಕೆ ಟಿವಿ : ಜಗತ್ತಿನ ವಿಚಿತ್ರ, ಅಚ್ಚರಿ ಮತ್ತು ವಿಸ್ಮಯ ಸಂಗತಿಗಳ ಬಗ್ಗೆ ವಿಡಿಯೋ ಅಪ್ಲೋಡ್ ಮಾಡುವ ಈ ಚಾನೆಲ್ ಸದ್ಯ 1.86 ಮಿಲಿಯನ್ subscribers ಗಳನ್ನು ಹೊಂದಿದ್ದು ಇವರ ತಿಂಗಳ ಆದಾಯ ಅಂದಾಜು 5-6 ಲಕ್ಷ ರೂಪಾಯಿ.
10. ಕದಂಬ ಟಿವಿ : ಮೋಟಿವೇಷನ್ ಮತ್ತು ಏಕಾಗ್ರತೆ ಬಗ್ಗೆ ವಿಡಿಯೋ ಅಪ್ಲೋಡ್ ಮಾಡುವ ಈ ಚಾನೆಲ್ ಸದ್ಯ 7 ಲಕ್ಷ subscribers ಗಳನ್ನು ಹೊಂದಿದ್ದು ಇವರ ತಿಂಗಳ ಆದಾಯ ಅಂದಾಜು 2-3 ಲಕ್ಷ ರೂಪಾಯಿ.
ಇದನ್ನೂ ಓದಿ…
ಇವರೇ ನೋಡಿ ಜಗತ್ತಿನ ಶ್ರೀಮಂತ ವ್ಯಕ್ತಿಗಳು!
1. ಬರ್ನಾರ್ಡ್ ಆರ್ನಲ್ಟ್ ಮತ್ತು ಕುಟುಂಬ : ಎಲ್ ವಿ ಎಂ ಎಚ್ ಕಂಪನಿಯ ಮಾಲೀಕರು ಇವರಾಗಿದ್ದು ಇವರ ಒಟ್ಟು ಆಸ್ತಿ 233 ಬಿಲಿಯನ್ ಡಾಲರ್ ಆಗಿದೆ.
2. ಏಲೋನ ಮಸ್ಕ್ : ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಎಂಬ ದೈತ್ಯ ಕಂಪನಿಗಳ ಸಂಸ್ಥಾಪಕರಾದ ಇವರ ಒಟ್ಟು ಆಸ್ತಿ 190 ಬಿಲಯನ್ ಡಾಲರ್ ಆಗಿದೆ.
3. ಜೆಫ್ ಬೆಜೋಸ್ : ಇವರು ಅಮೆಜಾನ್ ಎಂಬ ಕಂಪನಿಯ ಮಾಲೀಕರು ಆಗಿದ್ದಾರೆ ಇವರ ಒಟ್ಟು ಆಸ್ತಿ 137 ಬಿಲಿಯನ್ ಡಾಲರ್ ಆಗಿದೆ.
4.ಲ್ಯಾರಿ ಎಲ್ಲಿಸನ್ : ಓರಾಕಲ್ ಎಂಬ ಕಂಪನಿಯ ಮಾಲೀಕರು ಇವರು ಆಗಿದ್ದಾರೆ. ಇವರ ಒಟ್ಟು ಆಸ್ತಿ 127 ಬಿಲಿಯನ್ ಡಾಲರ್ ಆಗಿದೆ.
5. ವಾರನ್ ಬಫೆಟ್ : ಇವರು ಬರ್ಕ್ ಶೈರ್ ಹಾತ್ ವೇ ಎಂಬ ಕಂಪನಿಯ ಮಾಲೀಕರು ಆಗಿದ್ದಾರೆ. ಇವರ ಒಟ್ಟು ಆಸ್ತಿ 115 ಬಿಲಿಯನ್ ಡಾಲರ್ ಆಗಿದೆ.
6. ಬಿಲ್ ಗೇಟ್ಸ್ : ಇವರು ತಂತ್ರಜ್ಞಾನದ ದೈತ್ಯ ಸಂಸ್ಥೆಯಾದ ಮೈಕ್ರೋಸಾಫ್ಟ್ ಕಂಪನಿಯ ಮಾಲೀಕರು ಆಗಿದ್ದಾರೆ. ಇವರ ಒಟ್ಟು ಆಸ್ತಿ 114 ಬಿಲಿಯನ್ ಡಾಲರ್ ಆಗಿದೆ.
7. ಲ್ಯಾರಿ ಪೇಜ್: ಇವರು ಗೂಗಲ್ ಕಂಪನಿಯ ಸಹ ಸಂಸ್ಥಾಪಕರು. ಇವರ ಒಟ್ಟು ಆಸ್ತಿ 106 ಬಿಲಿಯನ್ ಡಾಲರ್ ಆಗಿದೆ.
8. ಸೇರ್ಗಿ ಬ್ರಿನ್ : ಇವರು ಕೂಡ ಗೂಗಲ್ ಕಂಪನಿಯ ಸಹ ಮಾಲೀಕರಾಗಿದ್ದಾರೆ. ಇವರ ಒಟ್ಟು ನಿವ್ವಳ ಆಸ್ತಿ ಒಂದು ನೂರು ಬಿಲಿಯನ್ ಡಾಲರ್ ಆಗಿದೆ.