Categories: information

Bharat Jain: ಇವನೇ ನೋಡಿ ವಿಶ್ವದ ಶ್ರೀಮಂತ ಭಿಕ್ಷುಕ! ಇವನ ಆಸ್ತಿ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ !

Spread the love

ಸ್ನೇಹಿತರೆ ನಾವು ನೀವೆಲ್ಲ ಆಫೀಸ್ ಗೆ ಅಥವಾ ಬೇರೊಂದು ಕೆಲಸಕ್ಕೆ ಹೋಗುವಾಗ ದಾರಿ ಮಧ್ಯದಲ್ಲಿ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡಾಗ ಅಥವಾ ಗುಡಿ ಗುಂಡಾರಗಳಿಗೆ ಹೋದಾಗ ಅಲ್ಲಿ ದಾರಿ ಇದ್ದಕ್ಕೂ ನಮಗೆ ಯಥೇಚ್ಛವಾಗಿ ಕಂಡುಬರುವವರು ಯಾರೆಂದರೆ ಅದು ಭಿಕ್ಷುಕರು. ಹೊಟ್ಟೆಪಾಡಿಗಾಗಿ ಭಿಕ್ಷೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಎಷ್ಟೋ ಕುಟುಂಬಗಳು ಒಂದು ಹೊತ್ತಿನ ಊಟಕ್ಕಾಗಿಯೂ ಕಂಡ ಕಂಡಲ್ಲಿ ಭಿಕ್ಷಾಟನೆಗೆ ಮುಂದಾಗುತ್ತವೆ. ಹಾಗಂತ ಎಲ್ಲ ಭಿಕ್ಷುಕರು ಕಡು ಬಡವರೇ ಎಂದರೆ ಅದು ತಪ್ಪಾಗುತ್ತದೆ. ಏಕೆಂದರೆ ಕೈಕಾಲು ಎಲ್ಲ ನೆಟ್ಟಗಿದ್ದು, ದಷ್ಟ ಪುಷ್ಟರಾಗಿರುವ ಎಷ್ಟೋ ಜನ ಮೈಗಳ್ಳರು ಕೂಡ ಇತ್ತೀಚೆಗೆ ಇದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡವರಾಗಿದ್ದಾರೆ. ಇಂಥವರಿಂದ ಮೂಲ ಅಥವಾ ನಿಜವಾದ ಭಿಕ್ಷುಕರಿಗೆ ಕುತ್ತು ಬಂದಿರುವುದಂತೂ ಗ್ಯಾರಂಟಿ. ಆದರೆ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಇಂತಹ ಒಬ್ಬ ಭಿಕ್ಷುಕ ಇಂದು ವಿಶ್ವದಲ್ಲಿಯೇ ನಂಬರ್ ವನ್ ಶ್ರೀಮಂತ ಭಿಕ್ಷುಕನಾಗಿ ಹೊರ ಹೊಮ್ಮಿದ್ದು ಹಲವರ ಹುಬ್ಬೇರುವಂತೆ ಮಾಡಿದೆ. ಹೌದು ಸ್ನೇಹಿತರೆ ಈ ವಿಷಯ ಕೇಳಲು ಸ್ವಲ್ಪ ವಿಚಿತ್ರ ಎನ್ನಿಸಿದರು ಇದು ಸತ್ಯವೇ. ಮುಂಬೈ ಮೂಲದ ಭರತ ಜೈನ್ ಎಂಬ ವ್ಯಕ್ತಿಯೇ ವಿಶ್ವದ ಶ್ರೀಮಂತ ಭಿಕ್ಷುಕ ನಾಗಿದ್ದಾನೆ. ಒಟ್ಟು ಸುಮಾರು 7.5 ಕೋಟಿನಷ್ಟು( ಸುಮಾರು 1 ಮಿಲಿಯನ್ ಡಾಲರ್ )ನೆಟ್ವರ್ತ್ ಹೊಂದಿರುವ ಈತ ಈಗ ಜಗತ್ತಿನಾದ್ಯಂತ ಪ್ರಸಿದ್ಧನಾಗಿದ್ದಾನೆ. ಜಗತ್ತಿನ ಎಲ್ಲ ಮೀಡಿಯಾಗಳು ಇವನನ್ನು ‘ವಿಶ್ವದ ಶ್ರೀಮಂತ ಭಿಕ್ಷುಕ’ ಎಂದು ಹಾಡಿ ಹೊಗಳಿವೆ. ಎಲ್ಲ ಟಿವಿ ಚಾನೆಲ್ ಗಳು ಇವನ ಬಗ್ಗೆ ತಪ್ಪದೆ ಒಂದು ಸಂದರ್ಶನ ಮಾಡಿ ಈತನ ಸಾಧನೆಯನ್ನು ಬಣ್ಣಿಸಿ ಆತನನ್ನು ವಿಶ್ವದ ಶ್ರೀಮಂತ ಭಿಕ್ಷುಕ ಎಂಬ ಬಿರುದನ್ನ ನೀಡಿವೆ.
ಬಡತನ ಕುಟುಂಬದಲ್ಲಿಯೇ ಹುಟ್ಟಿ ಬೆಳೆದ ಭರತ್ ಜೈನ ಆರ್ಥಿಕ ಸಂಕಷ್ಟದಿಂದಾಗಿ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಒಂದು ಹೊತ್ತಿನ ಊಟಕ್ಕಾಗಿಯೂ ಪರದಾಡುವ ಸಂದರ್ಭದಲ್ಲಿ ಇದ್ದ ಇವರ ಜೀವನ ಬಹು ಕಷ್ಟಕರ ಮಯವಾಗಿತ್ತು. ಇಷ್ಟೆಲ್ಲಾ ಇದ್ದಾಗಿಯೂ ಭರತ್ ಜೈನ್ ಭಾರತದ ಆರ್ಥಿಕ ರಾಜಧಾನಿ, ಬಾಲಿವುಡ್ ನ ತವರು ಮನೆಯಾದ ಮುಂಬೈನ ಬೀದಿ ಬೀದಿಗಳಲ್ಲಿ ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಭಿಕ್ಷೆ ಬೇಡಿ ತನ್ನ ಆರ್ಥಿಕ ದುರ್ಬಲತೆಯನ್ನು ಸರಿ ಮಾಡಿಕೊಳ್ಳಲು ಪಣತೊಟ್ಟ. ನಿಧಾನವಾಗಿ ಆತನ ತಿಂಗಳ ಆದಾಯ 60,000 ದಿಂದ 75000 ಕ್ಕೆ ಹೆಚ್ಚಿತು. ಈತನು ಸಾಮಾನ್ಯವಾಗಿ ಮುಂಬೈನ ಪ್ರಸಿದ್ಧ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೇ ಸ್ಟೇಷನ್ ಮತ್ತು ಅಜಾದ್ ಮೈದಾನ ಕ್ರೀಡಾಂಗಣದ ಎದುರು ಭಿಕ್ಷೆ ಬೇಡುತ್ತಾನೆ. ಇವೆರಡೂ ಸ್ಥಳಗಳು ಜನರಿಂದ ಕಿಕ್ಕಿರಿದು ತುಂಬಿದ ಸ್ಥಳಗಳಾಗಿವೆ ಮತ್ತು ಜನಸಂದನೀಯ ಪ್ರಮುಖ ಸ್ಥಳಗಳಾಗಿವೆ. ಐತಿಹಾಸಿಕ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣವು ಮುಂಚೆ ವಿಕ್ಟೋರಿಯಾ ಟರ್ಮಿನಸ್ ಎಂದು ಕರೆಸಿಕೊಳ್ಳುತ್ತಿತ್ತು. ಇದನ್ನು ಈಗ ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಇಲ್ಲಿ ಸಹಜವಾಗಿ ಜನದಟ್ಟನೆ ಹೆಚ್ಚಿರುತ್ತದೆ. ಇಂತಹ ಜನರ ದಯೆಗೆ ಒಳಗಾದ ಭರತ್ ಜೈನನ ಭಿಕ್ಷಾಟನೆ ಆದಾಯ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಲೇ ಹೋಯಿತು. ಪ್ರಸ್ತುತ ಈತ ಈಗ ಭಾರತದ ಅಷ್ಟೇ ಅಲ್ಲದೆ ವಿಶ್ವದ ಶ್ರೀಮಂತ ಭಿಕ್ಷುಕನಾಗಿ ಹೊರ ಹೊಮ್ಮಿದ್ದಾನೆ.
ನಿಜವಾಗಿಯೂ ಭರತ ಜೈನ್ ಸಂಪತ್ತೆಷ್ಟು?
ಪ್ರಸ್ತುತ ಭಾರತ ಜೈನ 7.5 ಕೋಟಿ ಆಸ್ತಿಯ ಒಡೆಯನಾಗಿದ್ದಾನೆ. ಈತನ ಹೆಸರಿನಲ್ಲಿ ಮುಂಬೈನಲ್ಲಿ 1.5 ಕೋಟಿ ಬೆಲೆಬಾಳುವ ಟು ಬಿ ಎಚ್ ಕೆ ಪ್ಲಾಟ್ (2 BHK FLAT),ಠಾಣೆಯಲ್ಲಿ ತಿಂಗಳಿಗೆ 30000 ಬಾಡಿಗೆ ತರುವ ಎರಡು ಅಂಗಡಿಗಳು ಬಾಡಿಗೆಗೆ ಇವೆ. ಭರತ ಜೈನನು ಪ್ರತಿದಿನ 10 ರಿಂದ 12 ಗಂಟೆಗಳಷ್ಟು ಭಿಕ್ಷೆ ಬೇಡಿ ದಿನವೊಂದಕ್ಕೆ 2000 ದಿಂದ 2500 ಹಣವನ್ನು ಸಂಪಾದಿಸುತ್ತಾನೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಯುನೈಟೆಡ್ ನೇಶನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ ನ ಅಡಿಯಲ್ಲಿ ಬಿಡುಗಡೆ ಮಾಡಿದ ಮಲ್ಟಿ ಡೈಮೆನ್ಶನಲ್ ಪಾವರ್ಟಿ ಇಂಡೆಕ್ಸ್ ವರದಿಯ ಪ್ರಕಾರ ಕಳೆದ 15 ವರ್ಷಗಳಲ್ಲಿ ಭಾರತವು ಸುಮಾರು 41.5 ಕೋಟಿ ಅಷ್ಟು ಜನ ಬಡತನ ರೇಖೆಗಿಂತಲು ಕೆಳಗಿದ್ದಾರೆ ಎಂದು ತಿಳಿದು ಬಂದಿದೆ.
ಭಾರತ ಜೈನ್ ಕೂಡ ಒಂದು ಬಡತನ ಕುಟುಂಬದಿಂದ ಬಂದವನಾಗಿದ್ದು ಆತ ತನ್ನ ಹೊಟ್ಟೆ ಹೊರೆಯಲು ಮೆಚ್ಚಿಕೊಂಡಿದ್ದ ಏಕೈಕ ವೃತ್ತಿ ಎಂದರೆ ಅದು ಕೇವಲ ಭಿಕ್ಷಾಟನೆ. ಆದರೆ ಅದನ್ನೇ ಆತ ಒಂದು ಅಮೋಘ ಲಾಭದ ವೃತ್ತಿಯನ್ನಾಗಿ ಮಾರ್ಪಡು ಮಾಡಿಕೊಂಡನು. ಆತನ ಕುಟುಂಬದಲ್ಲಿ ಆತನ ಹೆಂಡತಿ ಎರಡು ಮಕ್ಕಳು ಒಬ್ಬ ಅಣ್ಣ ಮತ್ತು ಅವನ ತಂದೆ ಇದ್ದಾರೆ. ಆತ ತನ್ನ ಭಿಕ್ಷಾಟನೆಯಿಂದ ಬಂದ ಹಣವನ್ನು ರಿಯಲಿ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿ ಅಲ್ಲಿಂದ ಹೆಚ್ಚು ಆದಾಯವನ್ನು ಗಳಿಸಿದ್ದಾನೆ. ಸದ್ಯ ಈತನ ಹೆಸರಿನಲ್ಲಿ ಮುಂಬೈನಂತಹ ದುಬಾರಿ ನಗರದಲ್ಲಿ ಎರಡು ಬೆಡ್ರೂಮ್ ಅಪಾರ್ಟ್ಮೆಂಟ್ ಸುಮಾರು 1.2 ಕೋಟಿಯ ಬೆಲೆ ಬಾಳುವ ಕಟ್ಟಡ ಇವನ ಹೆಸರಿನಲ್ಲಿದೆ. ಅಲ್ಲದೆ ಠಾಣೆಯಲ್ಲಿ ತಿಂಗಳಿಗೆ ಮೂವತ್ತು ಸಾವಿರ ಬಾಡಿಗೆಯನ್ನು ತಂದು ಕೊಡಬಲ್ಲ ಎರಡು ಅಂಗಡಿಗಳನ್ನು ಬಾಡಿಗೆಗೆ ಕೊಟ್ಟಿದ್ದಾನೆ ಇದರ ಹೊರತಾಗಿಯೂ ಆತ ದಿನಕ್ಕೆ ತನ್ನ 2000 ದಿಂದ 2500 ರೂ. ಸಂಪಾದನೆ ಮಾಡುತ್ತಾನೆ. ಆತ ತನಗೆ ವಿದ್ಯಾಭ್ಯಾಸ ಸಿಗದಿದ್ದಕ್ಕಾಗಿ ಅದರಿಂದ ಪಶ್ಚಾತಾಪ ಪಟ್ಟು ಆ ಪರಿಸ್ಥಿತಿ ತನ್ನ ಮಕ್ಕಳಿಗೆ ಭಾರದಿರಲಿ ಎಂದು ಅವರನ್ನು ಆಂಗ್ಲ ಮಾಧ್ಯಮ ಕಾನ್ವೆಂಟ್ ಶಾಲೆಗಳಿಗೆ ಕಳಿಸಿದ್ದಾನೆ. ಅವನ ಕುಟುಂಬದ ಉಳಿದ ಸದಸ್ಯರು ಸ್ಟೇಷನರಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಮೂಲಕ ಬಡತನದಿಂದ ಅಕ್ಷರಶಹ ಮೇಲೆದ್ದು ಬಂದಿದ್ದಾರೆ. ಇಷ್ಟೆಲ್ಲಾ ಇದ್ದಾಗಿಯೂ ಆತನ ಕುಟುಂಬ ಭರತ ಜೈನ್ ಗೆ ಭಿಕ್ಷೆ ಬೇಡುವುದನ್ನ ನಿಲ್ಲಿಸು ಈಗ ಸಾಕಷ್ಟು ಹಣ ನಮ್ಮ ಬಳಿ ಇದೆ ಎಂದು ಕೇಳಿಕೊಂಡರು ಆತ ದಿನಕ್ಕೆ ಇನ್ನೂ 10-12 ಗಂಟೆಗಳ ಕಾಲ ಭಿಕ್ಷಾಟನೆ ಮಾಡುತ್ತಾನೆ.
ಭಾರತದಲ್ಲಿ ಭಿಕ್ಷಾಟನೆ ಕಾನೂನುಗಳು ಇವೆಯೇ?
ಭಾರತದಲ್ಲಿ ಭಿಕ್ಷೆ ಬೇಡುವುದನ್ನು ನಿಷೇಧಿಸುವ ಯಾವುದೇ ಕಾನೂನುಗಳಿಲ್ಲ ಆದ್ರೆ ಕೆಲವು ರಾಜ್ಯಗಳು 1959ರ The Bombay Prevention of Begging Act ಅಡಿಯಲ್ಲಿ ಭಿಕ್ಷಾಟನೆ ವಿರೋಧಿ ಕಾನೂನನ್ನ ಜಾರಿಗೆ ತಂದಿವೆ. ಈ ಕಾನೂನಿನ ಪ್ರಕಾರ ಪೊಲೀಸರು ಭಿಕ್ಷಾಟನೆ ಮಾಡುವವರನ್ನು ವಾರೆಂಟ್ ಇಲ್ಲದೆ ಅರೆಸ್ಟ್ ಮಾಡಬಹುದಾಗಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಇಂತಹ ಭಿಕ್ಷಾಟನೆಗೆ ಯಾವುದೇ ಕಾನೂನನ್ನು ರಚಿಸಲು ಸಾಧ್ಯ ಆಗಿಲ್ಲ. ಒಟ್ಟಾರೆಯಾಗಿ ಇತ್ತೀಚೆಗೆ ಬಡತನದ ಹೆಸರಿನಲ್ಲಿ ಭಿಕ್ಷೆ ಬೆದುವವವರ ಹಾವಳಿಯೂ ಹೆಚ್ಚಾಗಿದ್ದು ಅಲ್ಲಿಯೂ ಕೂಡ ಸ್ಪರ್ಧೆ ಏರ್ಪಟ್ಟಿದೆ.ಅದೇನೇ ಇರಲಿ ಶ್ರದ್ಧೆ ಮತ್ತು ತಾಳ್ಮೆ ಇಂದ ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿದರೆ ನೀವು ಅಂದುಕೊಂಡದ್ದನ್ನು ಸಾಧಿಸಬಹುದು ಎಂಬುದಕ್ಕೆ ಭರತ್ ಜೈನ್ ಕತೆ ಒಂದು ಉದಾಹಣೆಯಷ್ಟೆ.

Thank you for reading this post, don't forget to subscribe!

ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನಮಸ್ಕಾರ.

Recent Posts

ಬೆಳೆ ಪರಿಹಾರ: ಹಿಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆಹಾನಿ ಪರಿಹಾರ ಜಮಾ! ಈಗಲೇ ಚೆಕ್ ಮಾಡಿ

ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…

56 years ago

ನಿಮ್ಮ ಜಮೀನಿನ ಆಕಾರ್ ಬಂದ್ ಡೌನ್ಲೋಡ್ ಮಾಡಿ ಜಮೀನಿನ ಅಸಲಿ ವಿಸ್ತೀರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

56 years ago

ಮಳೆ ಬರುವುದಕ್ಕೂ ಮುಂಚೆಯೇ ಮಾಹಿತಿ ನೀಡುವ ಆ್ಯಪ್ ಇಲ್ಲಿದೆ ನೋಡಿ! ನಿಮ್ಮ ಗ್ರಾಮದಲ್ಲಿ 5 ದಿನಕ್ಕೂ ಮೊದಲೇ ಮಳೆ ಮುನ್ಸೂಚನೆ ನೀಡುವ ಆ್ಯಪ್!

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು…

56 years ago

RTC : ರೈತರೇ ನಿಮ್ಮ ಉತಾರಿಯಲ್ಲಿ ವಕ್ಫ್ ಬೋರ್ಡ್ ಎಂದು ಇದೆಯಾ ಎಂದು ಈಗಲೇ ಚೆಕ್ ಮಾಡಿಕೊಳ್ಳಿ !

ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು…

56 years ago

ಬೆಳೆ ವಿಮೆ ಹಣ ಜಮಾ ಆಗಿಲ್ಲವೇ ? ಈ ನಂಬರಿಗೆ ಒಂದು ಕರೆ ಮಾಡಿ ಸಾಕು! ನಿಮ್ಮ ಹಣ ಜಮಾ ಆಗುತ್ತೆ

ಹೀಗೆ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದ ರೈತರಿಗೆ ರಾಜ್ಯ ಸರ್ಕಾರವು ಬೆಳೆ ವಿಮೆ ಪರಿಹಾರ ಹಣವನ್ನು ನೀಡುತ್ತದೆ. ಇದನ್ನ ನಿರ್ದಿಷ್ಟ…

56 years ago