ಸ್ನೇಹಿತರೆ ಇಂದಿನ ನಮ್ಮ ದಿನನಿತ್ಯದ ಜೀವನದಲ್ಲಿ ತಂತ್ರಜ್ಞಾನ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿದೆ. ಕುಳಿತಲ್ಲಿಂದಲೇ ಮೊಬೈಲ್ ನಲ್ಲಿ ಆಹಾರವನ್ನು ಆರ್ಡರ್ ಮಾಡುವುದರಿಂದ ಹಿಡಿದು ಲಕ್ಷ ಕಿಲೋಮೀಟರ್ ನಷ್ಟು ದೂರದಲ್ಲಿರುವ ಚಂದ್ರನ ಅಂಗಳವನ್ನು ನಾವು ಇದೇ ತಂತ್ರಜ್ಞಾನದ ಸಹಾಯದಿಂದ ತಲುಪಿದ್ದೇವೆ. ಆದರೆ ನಿಮಗೆ ಗೊತ್ತಾ ಸ್ನೇಹಿತರೆ ಆಧುನಿಕ ತಂತ್ರಜ್ಞಾನವನ್ನು ಮೀರಿಸಬಲ್ಲ ಹತ್ತು ಹಲವು ತಂತ್ರಜ್ಞಾನಗಳು ಸಾವಿರಾರು ವರ್ಷಗಳಷ್ಟು ಹಿಂದೆ ನಮ್ಮ ಪುರಾತನರು ಅವುಗಳನ್ನು ಬಳಸಿದ್ದಾರೆ ಎಂದು. ಅಷ್ಟೇ ಅಲ್ಲದೆ ಅದರಲ್ಲಿ ಕೆಲವು ತಂತ್ರಜ್ಞಾನಗಳಿಂದ ಪ್ರೇರಣೆ ಪಡೆದು ಇಂದು ಹಲವು ಆವಿಷ್ಕಾರಗಳು ವಿಜ್ಞಾನದ ಅಂಗಳದಲ್ಲಿ ಆಗಿದೆ ಮತ್ತು ಆಗುತ್ತಿದೆ. ಹಾಗಾದರೆ ಬನ್ನಿ ಸ್ನೇಹಿತರೆ ಇವತ್ತಿನ ಈ ಆರ್ಟಿಕಲ್ ನಲ್ಲಿ ಪ್ರಾಚೀನರು ಬಳಸುತ್ತಿದ್ದ ಅಂತಹ 10 ಆವಿಷ್ಕಾರಗಳ ಬಗ್ಗೆ ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಳ್ಳೋಣ.
Thank you for reading this post, don't forget to subscribe!1. ಮಾರ್ಲೆ ಯಂತ್ರ : ಮಾರ್ಲೆ ಯಂತ್ರವು ಒಂದು ದೊಡ್ಡ ಹೈಡ್ರಾಲಿಕ್ ಯಂತ್ರವಾಗಿದ್ದು ಇದನ್ನು 1684ರಲ್ಲಿ ಫ್ರಾನ್ಸ್ ನಲ್ಲಿ ತಯಾರಿಸಲಾಯಿತು. ಇದನ್ನು ಫ್ರಾನ್ಸ್ ನ ಅಂದಿನ ರಾಜನಾದ ಲೂಯಿ XIV ಅರಮನೆಯ ಉದ್ಯಾನವನಕ್ಕೆ ದೂರದ ಸೀನಿ ನದಿಯಿಂದ ನೀರನ್ನು ಎತ್ತಿ ಅವನ ಅರಮನೆಯ ಉದ್ಯಾನವನಕ್ಕೆ ಸಾಗಿಸಲು ಈ ಯಂತ್ರವನ್ನು ಕಂಡುಹಿಡಿಯಲಾಯಿತು. ಈ ಯಂತ್ರವು ಆ ಕಾಲದ ಅತಿ ದುಬಾರಿಯಾದ ಯಂತ್ರವಾಗಿತ್ತು. ಈ ಯಂತ್ರವನ್ನು ರಚನೆ ಮಾಡಿ ಬಿಡಿ ಭಾಗಗಳನ್ನು ಜೋಡಿಸಿ ತಯಾರಿಸುವಲ್ಲಿ ಮೂರು ವರ್ಷಗಳ ಕಾಲ ಸಮಯ ಹಿಡಿದಿತ್ತು. ಯಂತ್ರವು 14 ಬೃಹತ್ತಾದ ಚಕ್ರಗಳನ್ನು ಹೊಂದಿತ್ತು ಈ ಯಂತ್ರವು ಎರಡು ರೀತಿಯ ಕ್ರ್ಯಾಂಕ್ ಅಂದ್ರೆ ಕಬ್ಬಿಣದ ಬಾರ್ ಗಳನ್ನು ಹೊಂದಿತ್ತು. ಒಂದು ಕ್ರ್ಯಾಂಕ್ ಯಂತ್ರದ ಪಿಸ್ಟನ್ ಅನ್ನು ನೀರಿನಲ್ಲಿ ಮುಳುಗಿಸಿ ನೀರನ್ನು ಪೈಪಿನೊಳಗೆ ಒತ್ತುತ್ತಿತ್ತು. ಎರಡನೇ ಕ್ರಾಂಕ್ ಹೀಗೆ ಪೈಪಿನೊಳಗೆ ಬಂದ ನೀರನ್ನು ಎತ್ತಿ ಅರಮನೆಯ ಉದ್ಯಾನಕ್ಕೆ ಸಮೀಪದಲ್ಲಿದ್ದ ಬೆಟ್ಟದ ಮೇಲಿನ ನೀರಿನ ಟ್ಯಾಂಕರ್ ಗೆ ನೀರನ್ನು ಸರಬರಾಜು ಮಾಡುತ್ತಿತ್ತು. ಈ ಯಂತ್ರವು 133 ವರ್ಷಗಳ ಕಾಲ ಕೆಲಸ ನಿರ್ವಹಿಸಿ ಮುಂದೆ ತಾಂತ್ರಿಕ ಕಾರಣದಿಂದ ಮೂಲೆಗುಂಪಾಯಿತು.
2. ಗ್ರೀಕ್ ಅಗ್ನಿ ಯಂತ್ರ :- ಇದೊಂದು ಬೆಂಕಿಯನ್ನು ಉತ್ಪಾದಿಸುವ ಯಂತ್ರವಾಗಿದ್ದು ಗ್ರೀಕನ ಬೈಜಂಟೈನ್ ಸಾಮ್ರಾಜ್ಯದಲ್ಲಿ ಕ್ರಿಸ್ತಶಕ 7ನೇ ಶತಮಾನದಲ್ಲಿ ಇದನ್ನು ಕಂಡು ಹಿಡಿಯಲಾಯಿತು. ಇದನ್ನು ಶತ್ರುಪಡೆಗಳ ಹಡಗುಗಳಿಗೆ ಬೆಂಕಿ ಇಡಲು ಬಳಸಲಾಗುತ್ತಿತ್ತು. ಇದರಲ್ಲಿ ಪೆಟ್ರೋಲ್ ಮಿಶ್ರಿತ ಇಂಧನವನ್ನು ಬಳಸಲಾಗುತ್ತಿತ್ತು ಹೀಗೆ ಶತ್ರುಪಡೆಗಳಿಗೆ ಇದರಿಂದ ಹಚ್ಚಿದ ಬೆಂಕಿಯು ನೀರಿನ ಮೇಲು ಹತ್ತಿಕೊಳ್ಳುತ್ತಿತ್ತು, ಆದ್ದರಿಂದ ಇದನ್ನು ಬೈಜೆನ್ಟೈನ್ ದೊರೆಗಳು ವ್ಯಾಪಕವಾಗಿ ಯುದ್ಧಗಳಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಿದರು. ವಿಶೇಷವಾಗಿ ಅರಬ್ ದೊರೆಗಳ ವಿರುದ್ಧ ತಮ್ಮ ರಾಜಧಾನಿಯಾದ ಕಾನ್ಸ್ಟಂಟಿನೊಪಲ್ ಅನ್ನು ರಕ್ಷಿಸಲು ಅವರು ಇದನ್ನು ಬಳಸಿದ್ದರು.
3. ಹಬೆ ಯಂತ್ರ (Steam Engine) :- ಮೊಟ್ಟ ಮೊದಲ ಬಾರಿಗೆ ಹಬೆ ಯಂತ್ರವನ್ನು ಅಲೆಕ್ಸಾಂಡ್ರಿಯ ದೇಶದ ಹೀರೋನ್ ಎಂಬ ಇಂಜಿನಿಯರ್ ಮತ್ತು ಗಣಿತಜ್ಞ ಕಂಡುಹಿಡಿದ. ಅದಕ್ಕಾಗಿ ಇದನ್ನು ಹೀರೋನ ಯಂತ್ರ ಎಂತಲೂ ಕರೆಯುತ್ತಾರೆ. ಈ ಯಂತ್ರವನ್ನು ಯಾವ ಕಾರಣಕ್ಕಾಗಿ ಬಳಸಲಾಗುತ್ತಿತ್ತು ಎಂದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.
4. ಬಾಗ್ದಾದ್ ಬ್ಯಾಟರಿ : ಬಾಗ್ದಾದ್ ಬ್ಯಾಟರಿಯು 2000 ವರ್ಷಗಳಷ್ಟು ಹಳೆಯ ತಂತ್ರಜ್ಞಾನ ವಾಗಿದ್ದು ಇದನ್ನು 1936ರಲ್ಲಿ ಇರಾಕ್ನ ರಾಜಧಾನಿಯಾದ ಬಾಗ್ದಾದ್ನಲ್ಲಿ ಸಿಕ್ಕ ಹಳೆಯ ಕಾಲದ ಜಾರಿನಿಂದ ಪತ್ತೆ ಹಚ್ಚಲಾಗಿದೆ. ಇದನ್ನು ಪಾರ್ಥಿಯನ್ ಬ್ಯಾಟರಿ ಎಂತಲೂ ಕೂಡ ಕರೆಯಲಾಗುತ್ತದೆ. ಇದು ತಾಮ್ರದ ಸಿಲಿಂಡರ್ ಮತ್ತು ಕಬ್ಬಿಣದ ರಾಡನ್ನು ಹೊಂದಿದ asphalt ನಿಂದ ತಯಾರಿಸಲಾದ ಜಾರಾಗಿದೆ. ಇದರಲ್ಲಿ ನಿಂಬೆರಸ ದ್ರಾಕ್ಷಿ ರಸ ಅಥವಾ ಯಾವುದೇ ಎಲೆಕ್ಟ್ರೋಲೈಟಿಕ್ ದ್ರಾವಣವನ್ನು ಹಾಕಿದಾಗ ಈ ಜಾರಿನಲ್ಲಿ ಒಂದು ವೋಲ್ಟ್ ನಷ್ಟು ವಿದ್ಯುತ್ ಉತ್ಪತ್ತಿ ಆಗುತ್ತಿತ್ತು ಎಂದು ಹೇಳಲಾಗಿದೆ. ಇದರ ಕಾರ್ಯನಿರ್ವಹಿಸುವಿಕೆಯನ್ನು ಸಾಕ್ಷಿಕರಿಸಲು ಯಾವುದೇ ಆಧಾರಗಳು ಸಿಕ್ಕಿಲ್ಲ ಆದರೂ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರಿಗೆ ದೇವರ ಮೇಲೆ ನಂಬಿಕೆ ಉಂಟು ಮಾಡಲು ಶಾಕ್ ಕೊಡಲು ಬಳಸಲಾಗುತ್ತಿತ್ತು ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ.
5.ಕೆಟಮಾರನ್ ಗ್ಯಾಲಿ : ಇದೊಂದು ದೈತ್ಯಾಕಾರದ ಹಡಗಾಗಿದ್ದು ಇದನ್ನು ಈಜಿಪ್ತ ನ ದೊರೆಯಾದ ಟಾಲೆಮಿ IV, ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಇದನ್ನು ನಿರ್ಮಿಸಿದ್ದ. ಈ ಬೃಹತ್ ಆಕಾರದ ಹಡಗು ಒಟ್ಟು 6,000 ಜನರನ್ನು ಏಕಕಾಲಕ್ಕೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿತ್ತು. ಇಲ್ಲಿಯವರೆಗೆ ಇಂತಹ ದೈತ್ಯಾಕಾರದ ಹಡಗನ್ನ ನಿರ್ಮಿಸಲು ಸಾಧ್ಯವಾಗಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
6. ಭೂಕಂಪ ಅಳೆಯುವ ಮಾಪನ : ಚೀನಾದ ಲಿಯೋನಾರ್ಡೂ ಡಾ ವಿಂಚಿ ಒಂದು ಕರೆಯಲ್ಪಡುವ ಹನ್ ಸಾಮ್ರಾಜ್ಯದ ದೊರೆಯಾದ ಜಂಗ್ ಹ್ಯಾಂಗ ನು ಈ ಮಾಪನವನ್ನು ಕ್ರಿಸ್ತಶಕ 132 ರಲ್ಲಿ ಕಂಡು ಹಿಡಿದನು. ಇದೊಂದು ದೊಡ್ಡದಾದ ಬಟ್ಟಲಿ ನಕಾರದಾಗಿದ್ದು ಭೂಕಂಪನದ ಸಂದರ್ಭದಲ್ಲಿ ಹೊರ ಸೂಸುವಂತಹ ಸಿಸ್ಮಿಕ್ ಅಲೆಗಳನ್ನು ಗುರುತಿಸಬಲ್ಲದಾಗಿತ್ತು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
7. ಗ್ರೀಕನ ಆಟೋಮ್ಯಾಟಿಕ್ ಬಾಗಿಲುಗಳು : ಗ್ರೀಕ್ನ ಅಲೆಕ್ಸಾಂಡ್ರಿಯ ಸಾಮ್ರಾಜ್ಯವು ಜಗತ್ತಿನಲ್ಲಿಯೇ ಪರಪ್ರಥಮ ಬಾರಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಬಳಸಿದ ಸಾಮ್ರಾಜ್ಯವಾಗಿದೆ. ಇವುಗಳನ್ನು ಕೂಡ ಹೀರೋನ್ ಎಂಬ ವಿಜ್ಞಾನಿಯೇ ಕಂಡು ಹಿಡಿದಿದ್ದಾನೆ. ಈ ಬಾಗಿಲುಗಳು ಕಾರ್ಯನಿರ್ವಹಿಸಲು ಆತ ಹೈಡ್ರಾಲಿಕ್ ಸಿಸ್ಟಮ್ ಅನ್ನು ಬಳಸಿದ್ದ ಎಂಬುದು ಕಂಡು ಬಂದಿದೆ. ಈ ಬಾಗಿಲುಗಳನ್ನು ಭಕ್ತರಲ್ಲಿ ದೇವರ ಕುರಿತು ನಂಬಿಕೆ ಉಂಟು ಮಾಡುವಲ್ಲಿ ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಹೀಗೆ ಸ್ವಯಂ ಚಾಲಿತವಾಗಿ ಮುಚ್ಚುವುದು ಹಾಗು ತೆರೆಯುವ ಈ ಬಾಗಿಲನ್ನು ಸ್ವತಹ ದೇವರೇ ತನ್ನ ಕೃಪೆಯಿಂದ ಅಥವಾ ಅವನ ಮಹಿಮೆಯ ಶಕ್ತಿಯಿಂದ ಅವು ತನ್ನಿಂದ ತಾನಾಗಿಯೇ ತೆರೆದುಕೊಳ್ಳುತ್ತವೆ ಮತ್ತು ಮುಚ್ಚಿಕೊಳ್ಳುತ್ತವೆ ಎಂದು ಜನರು ನಂಬಿದ್ದರು. ಆದರೆ ಅದರ ಹಿಂದಿದ್ದ ಮರ್ಮವೆಂದರೆ ವಿಜ್ಞಾನ. ಹಾಗಂತ ಈ ತಂತ್ರಜ್ಞಾನ ಕೆಲವೇ ದಿನಗಳಲ್ಲಿ ಹುಟ್ಟಿಕೊಂಡಂತದ್ದಲ್ಲ ಅದು ಹಲವಾರು ವರ್ಷಗಳ ಶ್ರಮದ ಫಲವಾಗಿತ್ತು.
8. ಪ್ರಾಚೀನ ಚೀನಾದ ಡ್ರಿಲ್ಲಿಂಗ್ ತಂತ್ರಜ್ಞಾನ: ಸರಿಸುಮಾರು 2000 ವರ್ಷಗಳ ಹಿಂದೆ ಘನ ರೂಪದಲ್ಲಿದ್ದ ಲವಣಗಳನ್ನು ಕೊರೆದು ತೆಗೆಯಲು ಏನಾದ ಸಿಚುಯಾನ್ ಪ್ರಾಂತ್ಯದಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿತ್ತು ಎಂಬುದನ್ನ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಮುಂಚೆ ಈ ತಂತ್ರಜ್ಞಾನದಲ್ಲಿ ಬಿದಿರಿನ ಪೈಪುಗಳನ್ನ ಬಳಸಲಾಗುತ್ತಿತ್ತು. ಆದರೆ ಕ್ರಿಸ್ತಶಕ 10ನೇ ಶತಮಾನದಲ್ಲಿ ಹಗುರ ಮತ್ತು ತೆಳ್ಳನೆಯ ಕೇಬಲ್ಗಳ ಆವಿಷ್ಕಾರದ ನಂತರ ಈ ಯಂತ್ರದಲ್ಲಿ ಒಂದು ದೊಡ್ಡ ಕ್ರಾಂತಿಯೇ ಆಯಿತು.
9. ವಾಟರ್ ಮಿಲ್ : ನೀರಿನಿಂದ ವಿದ್ಯುತ್ ಉತ್ಪಾದಿಸುವ ಯಂತ್ರ. ಕ್ರಿಸ್ತಪೂರ್ವ ಒಂದನೆ ಶತಮಾನದಲ್ಲಿ ಗ್ರೀಕರು ಮೊಟ್ಟಮೊದಲ ಬಾರಿಗೆ ನೀರಿನ ಯಂತ್ರವನ್ನು ಬಳಸಿ ಅದರಿಂದ ವಿದ್ಯುತ್ತನ್ನು ಉತ್ಪಾದಿಸಬಹುದು ಎಂದು ಕಂಡುಕೊಂಡರು. ಹರಿಯುವ ನೀರಿಗೆ ಅಡ್ಡಲಾಗಿ ಸ್ಥಾಪಿಸಲಾಗುತ್ತಿದ್ದ ಈ ಯಂತ್ರವೂ ಪ್ಯಾಡಲ್ ಗಳನ್ನು ಮತ್ತು ಒಂದು ಉದ್ದವಾದ ಕಬ್ಬಿಣದ ರಾಡುಗಳನ್ನು ಹೊಂದಿರುತ್ತಿತ್ತು. ನೀರು ಹರಿದಂತೆಲ್ಲ ಪಾಡಲ್ಗಳು ತಿರುಗಿ ಅದರಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.
10. ಬೇಟೆಯಾಡುವ ಅಡ್ಡಬಿಲ್ಲು : 475 ರಿಂದ 220 ರ ಅವಧಿಯಲ್ಲಿ ಚೀನಾದಲ್ಲಿ ಈ ಬಿಲ್ಲನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ . ಇದನ್ನು ಸಾಮಾನ್ಯವಾಗಿ ದರೋಡೆಕೋರರನ್ನು ಮಟ್ಟ ಹಾಕಲು ಮತ್ತು ಪ್ರಾಣಿಗಳನ್ನು ಬೇಟೆಯಾಡಲು ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇದರಿಂದ ಹೊರಹೊಮ್ಮುತ್ತಿದ್ದ ಬಾಣವು ಸುಮಾರು 180 ಮೀಟರ್ನಷ್ಟು ದೂರಕ್ಕೆ ಚಿಮ್ಮುತ್ತಿತ್ತು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಇದು ಚೀನಾದ ಕಾಡು ಜನರು ಬೇಟೆಯಾಡಲು ಈ ಆಯುಧವನ್ನು ಬಳಸುತ್ತಾರೆ ಎಂದು ಕಂಡುಕೊಳ್ಳಲಾಗಿದೆ.
ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನಮಸ್ಕಾರ.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…